ಶನಿವಾರ, ಮಾರ್ಚ್ 28, 2020
19 °C

ಕೊರೊನಾ ಭೀತಿ: ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರ ನಾಳೆಯಿಂದ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯ ಕಾರಣಕ್ಕಾಗಿ ಶುಕ್ರವಾರದಿಂದ (ಮಾ. 20) 31ರ ತನಕ ಹುಬ್ಬಳ್ಳಿ–ಕೆಎಸ್‌ಆರ್‌ ಬೆಂಗಳೂರು ಜನಶತಾಬ್ದಿ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ‌ರದ್ದು ಮಾಡಲಾಗಿದೆ. 

ವಾರಕ್ಕೊಮ್ಮೆ ಸಂಚರಿಸುವ ಯಶವಂತಪುರ–ಪಂಢರಪುರ ಮತ್ತು ಮೈಸೂರು–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಕೂಡ ರದ್ದಾಗಿದೆ. ನಿತ್ಯ ಬೆಳಗಾವಿ–ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದು ಪಡಿಸಲಾಗಿದೆ.

ನಿತ್ಯ ಸಂಚರಿಸುವ ಮೈಸೂರು–ಯಲಹಂಕ ಮಾಲ್ಗುಡಿ ಎಕ್ಸ್‌ಪ್ರೆಸ್‌, ಮೈಸೂರು–ಬೆಂಗಳೂರು ರಾಜರಾಣಿ ಎಕ್ಸ್‌ಪ್ರೆಸ್‌, ವಾರದಲ್ಲಿ ನಾಲ್ಕು ದಿನ ಸಂಚರಿಸುವ ಶಿವಮೊಗ್ಗ–ಯಶವಂತಪುರ ತತ್ಕಾಲ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌, ವಾರಕ್ಕೊಮ್ಮೆ ತೆರಳುವ ಮೈಸೂರು–ರೇಣಗುಂಟಾ ಎಕ್ಸ್‌ಪ್ರೆಸ್‌, ಯಶವಂತಪುರ–ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ರದ್ದು ಮಾಡಲಾಗಿದೆ.

ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರ ಖಾತೆಗೆ ಟಿಕೆಟ್‌ ಹಣ ಜಮೆ ಆಗಲಿದೆ. ಕೌಂಟರ್‌ನಲ್ಲಿ ಮುಂಗಡ ಟಿಕೆಟ್‌ ಪಡೆದ ಪ್ರಯಾಣಿಕರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಬಳಿಕ ಅವರು ಹಣ ವಾಪಸ್ ಪಡೆಯಬಹುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು