ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಚಾಲಕ–ಮಾಲೀಕರು ವರ್ಷಕ್ಕೆ ಕೊಡುವ ಲಂಚ ₹47,852 ಕೋಟಿ!

Last Updated 28 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಸರಕು ಸಾಗಾಟ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಲಂಚದ ವ್ಯವಹಾರ ನಡೆಯುತ್ತದೆ ಎಂದು ಈ ಕ್ಷೇತ್ರದಲ್ಲಿ ಇರುವವರು ಹೇಳುತ್ತಿರುತ್ತಾರೆ. ಈ ರೀತಿಯಲ್ಲಿ ಕೈಬದಲಾಗುವ ಮೊತ್ತ ಎಷ್ಟು ಎಂಬುದನ್ನು ಈಗ ಸಮೀಕ್ಷೆಯೊಂದು ದೃಢಪಡಿಸಿದೆ.

ಪೊಲೀಸರು ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ಲಾರಿ ಮಾಲೀಕರು ಹಾಗೂ ಚಾಲಕರು ವರ್ಷಕ್ಕೆ ₹47,852 ಕೋಟಿ ಲಂಚ ನೀಡುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಅಂದಾಜು ಮಾಡಿದೆ.

‘ಸೇವ್‌ಲೈಫ್ ಫೌಂಡೇಷನ್’ ನಡೆಸಿರುವ ಮಾದರಿ ಸಮೀಕ್ಷೆಯು ಸರಕು ಸಾಗಾಟ ಮಾಡುವ ಟ್ರಕ್‌ಗಳ ಕಾರ್ಯಾಚರಣೆಯಲ್ಲಿ ನಡೆಯುವ ಬೃಹತ್ ಮೊತ್ತದ ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲಿದೆ.

ದೇಶದಾದ್ಯಂತ ಲಾರಿ ಚಾಲಕರು ಹಾಗೂ ಮಾಲೀಕರನ್ನು ಸಂದರ್ಶಿಸಿ ‘ಭಾರತದಲ್ಲಿ ಟ್ರಕ್ ಚಾಲಕರ ಸ್ಥಿತಿಗತಿ’ ಎಂಬ ವರದಿ ಸಿದ್ಧಪಡಿಸಲಾಗಿದೆ.ಲಂಚದ ಮೊತ್ತದಲ್ಲಿಯೂ ಪ್ರತೀ ವರ್ಷ ತೀವ್ರಗತಿಯ ಏರಿಕೆ ಕಂಡುಬಂದಿದೆ.2006–07ರ ಅವಧಿಯಲ್ಲಿ ಲಂಚದ ಮೊತ್ತ ₹22,048 ಇತ್ತು ಎಂದು ವರದಿ ತಿಳಿಸಿದೆ.

ಚಾಲಕರು ಲಂಚ ಏಕೆ ನೀಡುತ್ತಾರೆ?

ಭಯ

ಕಾನೂನು ಸಂಬಂಧಿ ಅಡಚಣೆಗಳಿಂದ ಪಾರಾಗಲು

ವ್ಯಾಪಾರ ನಷ್ಟವನ್ನು ತಪ್ಪಿಸಲು

ಪರಸ್ಪರ ಪ್ರಯೋಜನ ಪಡೆಯಲು

ಬೆಂಗಳೂರಿನಲ್ಲಿ ಲಂಚ ಎಷ್ಟು?

ಸಂಚಾರ ಅಥವಾ ಹೆದ್ದಾರಿ ಪೊಲೀಸರಿಗೆ ಲಂಚ ನೀಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಸಮೀಕ್ಷೆಗೆ ಒಳಪಟ್ಟವರ ಪೈಕಿ ಶೇ 50ಕ್ಕಿಂತಲೂ ಹೆಚ್ಚು ಚಾಲಕರು ಹೇಳಿದ್ದಾರೆ. ದೇಶದಾದ್ಯಂತ, ಲಂಚ ನೀಡುತ್ತಿರುವುದಾಗಿ ಹೇಳಿದವರ ಪ್ರಮಾಣ ಶೇ 67ರಷ್ಟಿದೆ

₹469 ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 24.2ರಷ್ಟು ಜನರು ಸ್ಥಳೀಯ ಸಂಘಟನೆಗಳಿಗೆ ನೀಡುವ ಸರಾಸರಿ ಲಂಚ

ಮಾದಕ ವಸ್ತು ಬಳಕೆ

ಸಂಚಾರದ ಅವಧಿಯಲ್ಲಿ ಮಾದಕವಸ್ತು ತೆಗೆದುಕೊಳ್ಳುತ್ತೇವೆ ಎಂದುಐವರಲ್ಲಿ ಒಬ್ಬರು ಚಾಲಕರು ಹೇಳಿಕೊಂಡಿದ್ದಾರೆ. ಕೋಲ್ಕತ್ತ, ಕಾನ್ಪುರ ಮತ್ತು ದೆಹಲಿಯಲ್ಲಿ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಚಾಲಕರು ಇದನ್ನು ಒಪ್ಪಿಕೊಂಡಿದ್ದಾರೆ.

ನಿದ್ದೆ, ಬಳಲಿಕೆ, ಅನಾರೋಗ್ಯ

ನಿದ್ದೆ, ಬಳಲಿಕೆ ಇದ್ದರೂ, ಲಾರಿ ಓಡಿಸುವ ಅನಿವಾರ್ಯ ಇರುತ್ತದೆ ಎಂದು ಅರ್ಧದಷ್ಟು ಚಾಲಕರು ಹೇಳಿದ್ದಾರೆ.ಚಾಲಕ ವೃತ್ತಿಯಿಂದಾಗಿ ಕಳೆದ 10 ವರ್ಷಗಳಿಂದ ತಮ್ಮ ಅಮೂಲ್ಯ ಜೀವನವು ಹಾಳಾಗಿದೆ ಎಂದು ಬೆಂಗಳೂರಿನಲ್ಲಿ ಸಮೀಕ್ಷೆಗೊಳಪಟ್ಟವರ ಪೈಕಿಶೇ 41ರಷ್ಟು ಮಂದಿ ಹೇಳಿದ್ದಾರೆ. ಪ್ರಯಾಣದ ವೇಳೆ ಚಾಲಕರು ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳನ್ನು ಸಮೀಕ್ಷೆ ಪಟ್ಟಿ ಮಾಡಿದೆ.

82%ಬೆನ್ನುನೋವು ಇದೆ ಎಂದವರು
65% ತಲೆನೋವು, ತಲೆಸುತ್ತು ಇದೆ ಎಂದವರು

101-ಸಮೀಕ್ಷೆಯಲ್ಲಿ ಪಾಲ್ಗೊಂಡ ಟ್ರಕ್ ಮಾಲೀಕರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT