ಸ್ಪೀಕರ್‌ಗೆ ಕೋರ್ಟ್‌ ನಿರ್ದೇಶನ ನೀಡುವಂತಿಲ್ಲ: ವಕೀಲರ ವಾದ

ಶುಕ್ರವಾರ, ಜೂಲೈ 19, 2019
24 °C

ಸ್ಪೀಕರ್‌ಗೆ ಕೋರ್ಟ್‌ ನಿರ್ದೇಶನ ನೀಡುವಂತಿಲ್ಲ: ವಕೀಲರ ವಾದ

Published:
Updated:

ನವದೆಹಲಿ:  ಹತ್ತು ಮಂದಿ ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಮಾಡುವಂತೆ ನ್ಯಾಯಾಲಯ ಸ್ಪೀಕರ್‌ಗೆ ನಿರ್ದೇಶನ ನೀಡುವಂತಿಲ್ಲ ಎಂದು ಸ್ಪೀಕರ್‌ ಪರವಾಗಿ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ಮನವರಿಕೆ ಮಾಡಿದ್ದಾರೆ. 

‘ಗುರುವಾರ ಸಂಜೆ 6ರ ಒಳಗಾಗಿ ಶಾಸಕರು ಸ್ಪೀಕರ್‌ ಎದುರು ಹಾಜರಾಗಬೇಕು. ರಾಜೀನಾಮೆ ಇತ್ಯರ್ಥದ ವಿಚಾರವಾಗಿ ಸ್ಪೀಕರ್‌ ಕೈಗೊಂಡ ಕ್ರಮದ ಕುರಿತು ಶುಕ್ರವಾರ ತಿಳಿಸಬೇಕು,’ ಎಂದು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ ಆದೇಶ ನೀಡಿದ್ದ ಬೆನ್ನಿಗೇ ಗುರುವಾರ ಮಧ್ಯಾಹ್ನ 2ಗಂಟೆಗೆ ಸ್ಪೀಕರ್‌ ಅವರೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿ ಅರ್ಜಿಯೊಂದನ್ನು ದಾಖಲಿಸಿದರು. ‘ಕಾಲ ಮಿತಿಯೊಳಗೆ ಅರ್ಜಿ ಇತ್ಯರ್ಥ ಅಸಾಧ್ಯ. ಅರ್ಜಿ ಇತ್ಯರ್ಥದ ಕುರಿತು ಸುಪ್ರೀಂ ಕೋರ್ಟ್‌ ಸ್ಪೀಕರ್‌ಗೆ ಆದೇಶ ನೀಡುವಂತಿಲ್ಲ,’ ಎಂದು ಸ್ಪೀಕರ್‌ ಪರ ವಕೀಲರು ವಾದಿಸಿದರು. 

‘ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆಯೇ ಇಲ್ಲವೇ ಎಂಬುದನ್ನು ಮಧ್ಯರಾತ್ರಿ 12ರ ಒಳಗಾಗಿ ಇತ್ಯರ್ಥ ಮಾಡಲು ಸಾಧ್ಯವಿಲ್ಲ. ವಿಚಾರಣೆ ಬಳಿಕವೇ ರಾಜೀನಾಮೆ ಅಂಗೀಕರಿಸಬೇಕು. ಜತೆಗೇ, ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಕೆಯಾಗಿದ್ದು, ಮೊದಲು ಅದನ್ನು ವಿಚಾರಣೆ ಮಾಡಬೇಕು,’ ಎಂದು ಸ್ಪೀಕರ್‌ ಕೋರ್ಟ್‌ಗೆ ತಿಳಿಸಿದ್ದಾರೆ.

ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಮಾಡಲು ಹೆಚ್ಚಿನ ಸಮಯವಕಾಶದ ಅಗತ್ಯವಿದೆ ಎಂದು ಸ್ಪೀಕರ್‌ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದರೆ, ಸುಪ್ರೀಂ ಕೋರ್ಟ್‌ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿತು. ‘ನಾಳೆ ಬೆಳಗ್ಗೆ ಕೋರ್ಟ್‌ ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡಲಿದೆ,’ ಎಂದು ಹೇಳಿತು. 

ಜತೆಗೇ, ನ್ಯಾಯಾಲಯ ಈಗಾಗಲೇ ಆದೇಶ ಮಾಡಿದೆ. ಮುಂದೆ ಏನು ಮಾಡಬೇಕು ಎಂಬುದು ಸ್ಪೀಕರ್‌ಗೆ ಬಿಟ್ಟ ವಿಚಾರ. ಈ ಅರ್ಜಿಯನ್ನು ನಾಳೆ ವಿಚಾರಣೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿತು.  

ಬರಹ ಇಷ್ಟವಾಯಿತೆ?

 • 27

  Happy
 • 1

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !