ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19: ರಾಜ್ಯದಲ್ಲಿ ವಿದೇಶದ ಸೋಂಕಿತರಿಗಿಂತ ಸ್ಥಳೀಯ ಸೋಂಕಿತರೇ ಹೆಚ್ಚು

Last Updated 13 ಏಪ್ರಿಲ್ 2020, 12:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿದೇಶದಿಂದ ಮರಳಿದವರಿಗಿಂತ ಸ್ಥಳೀಯರಲ್ಲೇ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿಏಪ್ರಿಲ್ 10ರಿಂದ ದಾಖಲಾದ33 ಪ್ರಕರಣಗಳು ವಿದೇಶಿ ಸೋಂಕಿಲ್ಲದ ಪ್ರಕರಣಗಳಾಗಿವೆ. ಇದರಿಂದಾಗಿ ಮೊದಲ ಬಾರಿಗೆ ವಿದೇಶದಿಂದ ಬಂದ ಕೊರೊನಾ ಪಾಸಿಟಿವ್ಪ್ರಕರಣಗಳಿಗಿಂತಸ್ಥಳೀಯವಾಗಿ ಪತ್ತೆಯಾದ ಕೊರೊನಾಸೋಂಕು ಪ್ರಕರಣಗಳೇಹೆಚ್ಚಿವೆ.

ಏಪ್ರಿಲ್ 12ರವರೆಗೆ ರಾಜ್ಯದಲ್ಲಿ ಪರೀಕ್ಷಿಸಲಾದ ಒಟ್ಟು9,251 ರಕ್ತದ ಮಾದರಿಗಳಲ್ಲಿ 232 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಏಪ್ರಿಲ್ 12ರವೇಳೆಗೆ ವಿದೇಶದಿಂದ ಮರಳಿದವರಿಗೆ ಮತ್ತು ಅವರ ಸಂಪರ್ಕ ಹೊಂದಿದವರ ಒಟ್ಟು ಪ್ರಕರಣಗಳ ಸಂಖ್ಯೆ 98, ತಬ್ಲಿಗಿ ಜಮಾತ್ ಕ್ಲಸ್ಟರ್ ಮತ್ತು ಮೈಸೂರು ಫಾರ್ಮಾ ಕಾರ್ಖಾನೆಯ ಪ್ರಕರಣಗಳನ್ನು ದೇಶೀಯ ಪ್ರಕರಣಗಳು ಎಂದು ಪರಿಗಣಿಸಲಾಗಿದ್ದು, ಇವುಗಳ ಸಂಖ್ಯೆ ಭಾನುವಾರ 128ಕ್ಕೆ ತಲುಪಿದ್ದವು.

ತಬ್ಲಿಘಿ ಜಮಾತ್‌‌ನ 50 ಪ್ರಕರಣಗಳು, ನಂಜನಗೂಡಿನ ಖಾಸಗಿ ಫಾರ್ಮಾ ಕಾರ್ಖಾನೆಯಲ್ಲಿ 36 ಕೊರೊನಾ ಸೋಂಕು ತಗುಲಿದ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲದೆ, 42 ಪ್ರಕರಣಗಳು ಯಾವುದೇ ವಿದೇಶಿಯರ ಸಂಪರ್ಕವಿಲ್ಲದೆ ಪತ್ತೆಯಾದ ಪ್ರಕರಣಗಳಾಗಿವೆ.ಇವೆಲ್ಲವುಗಳನ್ನು ಒಟ್ಟಾರೆ ಶುದ್ಧ ಭಾರತದ ಪ್ರಕರಣಗಳು ಎಂದು ವ್ಯಾಖ್ಯಾನಿಸಲಾಗಿದೆ. ವಾರ್ ರೂಮ್‌‌ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 12ರ ಭಾನುವಾರದ ವೇಳೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 128ಕ್ಕೆ ತಲುಪಿತ್ತು.

ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾದ 7 ಪ್ರಕರಣಗಳೂ ಸೇರಿದಂತೆ ಕರ್ನಾಟಕದಲ್ಲಿ ಭಾನುವಾರ 17 ಹೊಸ ಪ್ರಕರಣಗಳು ಪತ್ತೆಯಾಗಿವೆ.ವಿಜಯಪುರಕ್ಕೆ ಸೋಂಕಿನ ಮೂಲ ಎಲ್ಲಿದೆ ಎಂಬುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.

ಮಾರ್ಚ್ 8ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಆರಂಭದಲ್ಲಿ ವಿದೇಶಗಳಿಂದ ಬಂದವರಲ್ಲಿ ಹಾಗೂ ಅವರ ಸಂಪರ್ಕದಲ್ಲಿದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಈಗ ಸ್ಥಳೀಯರಲ್ಲಿಯೇ ಈ ಸೋಂಕು ಪತ್ತೆಯಾಗುತ್ತಿದ್ದು ವಿದೇಶೀ ಪ್ರಕರಣಗಳನ್ನೇ ಮೀರಿಸಿವೆ.

ಮಾರ್ಚ್ 23ರಂದು ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಈ ಸಮಯದಲ್ಲಿ ವಿದೇಶದಿಂದ ಬಂದ 35,000ಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ಕಡ್ಡಾಯ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಈ ಪ್ರಕರಣಗಳಿಗೆ ಹೋಲಿಸಿದರೆ, ಸ್ಥಳೀಯ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ.

ಏಪ್ರಿಲ್ 12ರ ವೇಳೆಗೆ ಕರ್ನಾಟಕದಲ್ಲಿ ಪರೀಕ್ಷಿಸಲಾದ 9,251 ಮಾದರಿಗಳಲ್ಲಿ 232 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 222 ಪ್ರಕರಣಗಳಲ್ಲಿಸೋಂಕಿನ ಮೂಲವನ್ನು ಗುರುತಿಸಲಾಗಿದ್ದರೂ, ಅಧಿಕೃತ ಮಾಹಿತಿಯ ಪ್ರಕಾರ, ಇದುವರೆಗೆ ಸುಮಾರು 10 ಪ್ರಕರಣಗಳಲ್ಲಿ ಸೋಂಕಿನ ಮೂಲವನ್ನು ಪತ್ತೆ ಮಾಡಲಾಗಿಲ್ಲ.

ಇದುವರೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಆರು ಸಾವುಗಳು ಸಂಭವಿಸಿವೆ, ಇವುಗಳಲ್ಲಿ ಇಬ್ಬರು ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದರು, ಒಬ್ಬರು ಮಾರ್ಚ್‌ನಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು. ವಿಪರ್ಯಾಸವೆಂದರೆ, ಗದಗ, ಬಾಗಲಕೋಟೆಯಲ್ಲಿ ಮತ್ತು ಕಲಬುರ್ಗಿಯಲ್ಲಿ ಸಂಭವಿಸಿದ ಮೂರು ಸಾವಿನ ಪ್ರಕರಣಗಳಲ್ಲಿ ಸೋಂಕಿನ ಮೂಲ ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಕರ್ನಾಟಕ ಸರ್ಕಾರದ ಕೋವಿಡ್ -19 ವಾರ್ ರೂಮ್ ನಲ್ಲಿ ನಡೆಸಿದ ಪ್ರತಿದಿನದ ದತ್ತಾಂಶ ವಿಶ್ಲೇಷಣೆಯ ಪ್ರಕಾರ, ರಾಜ್ಯದಲ್ಲಿ ವಿದೇಶದಿಂದ ಮರಳಿದವರಲ್ಲಿ ಅರಬ್ ದೇಶದಿಂದ ಬಂದ 26 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಎಂಟು ಮಂದಿ ಅಮೆರಿಕಾದಿಂದ, ಏಳು ಮಂದಿ ಬ್ರಿಟನ್ ನಿಂದ ಬಂದವರಲ್ಲಿ, ಆರು ಮಂದಿ ಸೌದಿ ಅರೆಬಿಯಾ, ನಾಲ್ಕು ಮಂದಿ ಸ್ಪೇಯ್ನ್ ಮತ್ತು ಜರ್ಮನಿ, ಮೂರು ಮಂದಿ ಗ್ರೀಕ್, ಇಬ್ಬರು ಬ್ರೆಜಿಲ್ ಮತ್ತು ಫ್ರಾನ್ಸ್, ಮತ್ತೊಬ್ಬರು ಸ್ವಿಟ್ಜರ್ ಲ್ಯಾಂಡ್, ಶ್ರೀಲಂಕಾ, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಇಂಡೋನೇಷಿಯಾದಿಂ ಬಂದ ತಲಾ ಒಬ್ಬೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.ಈ 67 ಮಂದಿಯಿಂದ 31 ಮಂದಿಗೆ ಸೋಂಕು ತಗುಲಿದೆ.


ರಾಜ್ಯದಲ್ಲಿ ಪರೀಕ್ಷಿಸಿದ 1100 ರಕ್ತ ಮಾದರಿಗಳಲ್ಲಿ 50 ಮಂದಿಯ ರಕ್ತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,ಇದು ಕರ್ನಾಟಕದ ಒಂದು ಭಾಗವಾಗಿದ್ದರೆ, ಮತ್ತೊಂದು ಭಾಗ ಎಂದರೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಜುಬಿಲಿಯಂಟ್ ಜೆನರಿಕ್ಸ್ ಲಿಮಿಟೆಡ್‌‌ನ 36 ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿರುವುದು.ನಂಜನಗೂಡಿನ ಜುಬುಲಿಯಂಟ್ ಪ್ರಕರಣ ಪ್ರಸ್ತುತ ರಾಜ್ಯದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇ.10.4ರಷ್ಟು ಭಾಗವನ್ನು ಹೊಂದಿದೆ.

ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಉದ್ಯೋಗಿ ಮಾರ್ಚ್ 26 ರಂದು ಕೊರೊನಾ ಸೋಂಕು ಪಾಸಿಟಿವ್ ಎಂದು ಪತ್ತೆಯಾಗಿದ್ದು ರಾಜ್ಯದ ಮೊದಲ ಪ್ರಕರಣ. ಮತ್ತೆ ಏಪ್ರಿಲ್ 11ರ ಭಾನುವಾರ ಹೊಸದಾಗಿ ಐದು ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿವೆ.

ಚೀನಾದಿಂದ ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಅಥವಾ ಪ್ಯಾಕೇಜಿಂಗ್ ಮೂಲಕ ಸೋಂಕು ಸಂಭವಿಸಿರಬಹುದು ಎಂದು ಆರೋಗ್ಯ ಅಧಿಕಾರಿಗಳುಆರಂಭದಲ್ಲಿ ಹೇಳಿದ್ದರು. ಆದರೆ, ಈಗ ಸಂಸ್ಥೆಗೆ ಅಥವಾ ಮೈಸೂರು ಪ್ರದೇಶಕ್ಕೆ ಭೇಟಿ ನೀಡಿದ ವಿದೇಶಿಯರೊಂದಿಗೆ ಕಾರ್ಮಿಕರು ನಡೆಸಿದ ಸಂವಾದದ ಸಮಯದಲ್ಲಿ ಹರಡಿರಬಹುದುಎಂದು ಹೇಳುತ್ತಾರೆ.

"ಪ್ಯಾಕೇಜಿಂಗ್ ಮತ್ತು ಕಚ್ಚಾ ವಸ್ತುಗಳನ್ನು ಅಧ್ಯಯನ ಮಾಡಲು ಮತ್ತು ವರದಿ ನೀಡಲ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕೇಳಿಕೊಂಡಿದ್ದೇವೆ " ಎಂದು ಕರ್ನಾಟಕ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT