ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗಳಲ್ಲಿ ಕೋವಿಡ್‌-19 ಪರಿಸ್ಥಿತಿ

Last Updated 4 ಏಪ್ರಿಲ್ 2020, 19:51 IST
ಅಕ್ಷರ ಗಾತ್ರ
ADVERTISEMENT
""

*ಮೈಸೂರು ಜಿಲ್ಲೆಯಲ್ಲಿ ಶನಿವಾರ ಮತ್ತೆ ಏಳು ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 28ಕ್ಕೆ ಏರಿದೆ.

*ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ತಬ್ಲೀಗ್‌ ಜಮಾತ್‌ಗೆ ತೆರಳಿದ್ದ ಇಬ್ಬರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಇದೀಗ 12 ಕ್ಕೇರಿದೆ.

*ದೆಹಲಿಯಲ್ಲಿ ಧರ್ಮಸಭೆಯಲ್ಲಿ ಪಾಲ್ಗೊಂಡು ಮಂಡ್ಯಕ್ಕೆ ಬಂದಿದ್ದ 10 ಮಂದಿ ಧರ್ಮಗುರುಗಳ ಪೈಕಿ ಐವರಲ್ಲಿ ಕೋವಿಡ್‌ –19 ಸೋಂಕು ಪತ್ತೆಯಾಗಿದೆ. ಅವರನ್ನು ಮೈಸೂರು ಜಿಲ್ಲಾಡಳಿತ ವಶಕ್ಕೆ ಪಡೆದು ಕ್ವಾರಂಟೈನ್‌ ಮಾಡಿದೆ.

*ವಿರಾಜಪೇಟೆ ಪಟ್ಟಣದ ಬಾಡಿಗೆ ಮನೆಯಲ್ಲಿ ತಂಗಿದ್ದ ಗುಜರಾತ್‌ ರಾಜ್ಯದ ‘ಶೂರಾ ತಬ್ಲೀಗ್‌ ಜಮಾತ್‌’ಗೆ ಸೇರಿದ 9 ಮೌಲ್ವಿಗಳು ಪತ್ತೆಯಾಗಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ.

*ಕೋವಿಡ್‌ ಸೋಂಕಿಗೆ ಬಲಿಯಾದ ವೃದ್ಧನ ಅಂತ್ಯಕ್ರಿಯೆಯು ಕುಟುಂಬದವರ ಅನುಪಸ್ಥಿತಿಯಲ್ಲಿ ಬಾಗಲಕೋಟೆಯಲ್ಲಿ ನಡೆಯಿತು.

*ಕೋವಿಡ್‌–19 ನಿಯಂತ್ರಣ ಚಟುವಟಿಕೆಗಳ ನಿರ್ವಹಣೆಗಾಗಿ ಪ್ರಧಾನ ಮಂತ್ರಿ ಆರಂಭಿಸಿರುವ ಪಿಎಂ ಕೇರ್ಸ್‌ ನಿಧಿಗೆ ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ₹ 4 ಕೋಟಿ ದೇಣಿಗೆ ನೀಡಿದೆ. ಎಂಆರ್‌ಪಿಎಲ್‌ನ ಸಿಎಸ್‌ಆರ್‌ ನಿಧಿಯಡಿ ಒಟ್ಟು ₹ 3 ಕೋಟಿ ದೇಣಿಗೆ ನೀಲಾಗಿದೆ. ಇದರ ಜತೆಗೆ ಎಂಆರ್‌ಪಿಎಲ್‌ನ ನೌಕರರ ವೇತನದಿಂದ ₹ 1 ಕೋಟಿ ದೇಣಿಗೆ ನೀಡಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT