ಶನಿವಾರ, ಆಗಸ್ಟ್ 8, 2020
23 °C

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಇವರಿಗೆ ಶನಿವಾರ ಕೋವಿಡ್ ತಪಾಸಣೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. 

ಮುಂಜಾಗ್ರತಾ ಕ್ರಮವಾಗಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಜನಾರ್ದನ ಪೂಜಾರಿ ಹಿರಿಯ ಪುತ್ರ ಸಂತೋಷ್ ಜೆ. ಪೂಜಾರಿ, 'ಪ್ರಸಕ್ತ ಜನಾರ್ದನ ಪೂಜಾರಿ ಆರೋಗ್ಯವಾಗಿದ್ದು, ಯಾರೂ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಆರಂಭದಲ್ಲಿ ಪೂಜಾರಿ ಅವರ ಸೊಸೆ ಮೂಲಕ ಮನೆಗೆ ಪ್ರವೇಶಿಸಿದ ಸೋಂಕು ಬಳಿಕ ಅವರ ಪತ್ನಿಗೆ ಬಂದಿತ್ತು. ಅವರು ಗುಣಮುಖರಾಗುತ್ತಿದ್ದು, ಇವರು ಕೂಡಾ ಶೀಘ್ರದಲ್ಲೇ ಗುಣಮುಖರಾಗಲು ನಾವೆಲ್ಲರೂ ಪ್ರಾರ್ಥಿಸೋಣ' ಎಂದು ತಿಳಿಸಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು