ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ಉದ್ಧಟತನ ಕೊರೊನಾ ಸೋಂಕು ಉಲ್ಬಣಕ್ಕೆ ಕಾರಣ: ವಿಜ್ಞಾನಿ ಬಲರಾಂ

ರಾಜೀವ್ ಗಾಂಧಿ ಆರೋಗ್ಯ ವಿ.ವಿ. 22ನೇ ಘಟಿಕೋತ್ಸವದಲ್ಲಿ ವಿಜ್ಞಾನಿ ಬಲರಾಂ ಪ್ರತಿಪಾದನೆ
Last Updated 25 ಜೂನ್ 2020, 20:27 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗತ್ತಿನೆಲ್ಲೆಡೆ ರಾಜಕಾರಣಿಗಳ ಅಜ್ಞಾನದೊಂದಿಗೆ ಉದ್ಧಟತನವೂ ಸೇರಿಕೊಂಡಿದ್ದರಿಂದ ಕೊರೊಕ್ವಿನ್‌ ಸಹ ಕೊರೊನಾಗೆ ಔಷಧ ಎಂದು ಘೋಷಿಸುವಂತಾಗಿ, ನಿಜವಾದ ಔಷಧ ಕಂಡುಹಿಡಿಯುವುದು ಸಹ ವಿಳಂಬವಾಗಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ.ಪಿ.ಬಲರಾಂ ಹೇಳಿದರು.

ಗುರುವಾರ ಇಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘2003ರಲ್ಲಿ ಸಾರ್ಸ್‌ ಸೋಂಕು ಕಾಣಿಸಿಕೊಂಡಿತ್ತು. ಆಗಲೇ ಅದಕ್ಕೊಂದು ನಿರ್ದಿಷ್ಟ ಲಸಿಕೆ ಹುಡುಕಿದ್ದರೆ ಕೊರೊನಾ ಇಷ್ಟು ಮೆರೆಯಲು ಸಾಧ್ಯವೇ ಇರಲಿಲ್ಲ. ಆದರೆ ಇದು ಯಾರಿಗೂ ಬೇಡವಾಗಿತ್ತು. ಈಗಲೂ ಅಷ್ಟೇ, ಜಗತ್ತಿನ ಶ್ರೀಮಂತ ರಾಷ್ಟ್ರಗಳೂ ಯುದ್ಧ ಸಿದ್ಧತೆಗೆ ತೆಗೆದಿರಿಸುವ ಹಣವನ್ನು ವೈದ್ಯಕೀಯ ಸಂಶೋಧನೆಗೆ ನೀಡುತ್ತಿಲ್ಲ’ ಎಂದರು.

‘ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವೈದ್ಯಕೀಯ ಸಂಶೋಧನೆಗೆ ಗಮನ ಹರಿಸದೆ ಇರುವುದರಿಂದಲೇ ಕೋವಿಡ್‌ನಂತಹ ಸೋಂಕು ರೋಗಗಳು ಕಾಣಿಸಿದಾಗ ನಮ್ಮ ಆಸ್ಪತ್ರೆಗಳು ಅದನ್ನು ನಿಭಾಯಿಸುವುದು ಸಾಧ್ಯವಿಲ್ಲದ ಸ್ಥಿತಿಗೆ ಬರುವಂತಾಗಿದೆ’ ಎಂದರು ಆರೋಪಿಸಿದರು.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಲ್‌.ಅಪ್ಪಾಜಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT