ಸೋಮವಾರ, ಮಾರ್ಚ್ 30, 2020
19 °C

ಕೋವಿಡ್–19 ಸೋಂಕಿತ ಇಬ್ಬರು ಸಂಪೂರ್ಣ ಚೇತರಿಕೆ- ಸಚಿವ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತ ಇಬ್ಬರು ಸಂಪೂರ್ಣ ಚೇತರಿಸಿಕೊಂಡಿದ್ದು, ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪೂರ್ಣ ಗುಣಮುಖರಾಗಿ ಮನೆಗೆ ತೆರಳುವ ಅವರಿಬ್ಬರ ಬಗ್ಗೆ ಇನ್ನೂ 14 ದಿನ‌ ಮನೆಯಲ್ಲಿ ನಿಗಾ ವಹಿಸಲಾಗುವುದು ಎಂದರು.

ಸೋಂಕು ತಗಲಿದ್ದ ಎರಡನೇ ಮತ್ತು ಐದನೇ ವ್ಯಕ್ತಿ ಚೇತರಿಸಿಕೊಂಡವರು. ಆದರೂ ಮುಂದಿನ 24 ಗಂಟೆಗಳಲ್ಲಿ ಅವರಿಗೆ ಇನ್ನು ಎರಡು ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಇಷ್ಟು ದಿನ ವೈರಸ್ ನಿಂದ ಜನರು ಭಯ ಪಡುತ್ತಿದ್ದರು. ಸೋಂಕು ತಗುಲಿದರೆ ಏನು ಆಗುತ್ತೋ ಏನೋ ಎಂದು ಜನರು ಭಯಪಡುತ್ತಿದ್ದರು. ಇದೀಗ ಆ ಜನರ ಭಯ ಈ ಪ್ರಕರಣಗಳಿಂದ ದೂರ ಆಗಿದೆ. ಇನ್ನುಳಿದವರು ಕೂಡ ಶೀಘ್ರವೇ ಗುಣ ಮುಖರಾಗಲಿದ್ದಾರೆ. ಶುಕ್ರವಾರ ಕೂಡ ಗುಣ ಮುಖರಾದವರ ವಿಷಯವನ್ನು ತಿಳಿಸುತ್ತೇನೆ ಎಂದರು.

ಸೋಂಕು ನಿಯಂತ್ರಣಕ್ಜೆ ಸಂಬಂಧಿಸಿದಂತೆ ರಚಿಸಿರುವ ಉಪ ಸಮಿತಿ ಸಭೆ ನಡೆಸಿ,  ಕೆಲವು ಕ್ರಮಗಳ ಬಗ್ಗೆ ತೀರ್ಮಾನಕ್ಕೆ ಬಂದಿದ್ದೇವೆ‌. ಮುಂದಿನ ಒಂದು ವಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ವಿಧಿ ವಿಧಾನಗಳ ಬಗ್ಗೆಯೂ ಕ್ರಮಕ್ಕೆ ಸೂಚಿಸಿದ್ದೇವೆ.

19 ವರ್ಷದ ಒಳಗೆ ಹಾಗೂ 65 ವರ್ಷದ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಲಾಗಿದೆ. ಅವರಿಗೆ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ ಇವರು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ತೀರ್ಮಾನ ಕೈಗೊಂಡಿದೆ. ಅದರಂತೆ ನಾವು ಕ್ರಮ ಕೈ ಗೊಂಡಿದ್ದೇವೆ.

ಪಬ್ ಮುಚ್ಚದೆ ಇದ್ದರೆ ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಲಾಗುವುದು. ಅಂಥ ಪಬ್ ಗಳ ಪರಾವನಗಿ ರದ್ದು ಮಾಡಲಾಗುವುದು. ಈ ಬಗ್ಗೆ ಗೃಹ ಸಚಿವ ಹಾಗೂ ಅಬಕಾರಿ ಸಚಿವರ ಜೊತೆ ಚರ್ಚೆ ಮಾಡಿದ್ದೇವೆ

ಬೆಂಗಳೂರಿನ ಎಲ್ಲ ಆಸ್ಪತ್ರೆ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವಂತೆ ಸೂಚಿಸಲಾಗಗಿದೆ. ಜಾತ್ರೆ, ಸಂತೆ , ಮದುವೆ, ನಿಶ್ಚಿತಾರ್ಥ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿ ತೀರ್ಮಾನ ಮಾಡಲಾಗಿದೆ. ಒಂದು ವೇಳೆ ಈ ಕಾರ್ಯಕ್ರಮಗಳು ಆಗಲೇಬೇಕು ಅಂದರೆ ‌100 ರಿಂದ 150೦ ಜನ ಸೇರಿ ಸಮಾರಂಭ ಮಾಡಲಿ. ದು ಬಿಟ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡೋದ್ರಿಂದ ಸಮಸ್ಯೆ ಆಗುತ್ತದೆ ಎಂದರು.

ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜಿನ ಹೌಸ್ ಸರ್ಜನ್ ಗಳನ್ನ ಕೋವಿದ್ 19 ಕ್ಕೆ ಒಂದು ತಿಂಗಳುಗಳ ಕಾಲ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಧಾರ್ಮಿಕ ಮುಂದಾಳುಗಳು, ಮೌಲ್ವಿಗಳು, ಫಾದರ್ ಗಳು ತಮ್ಮ ಅನುಯಾಯಿಗಳು ಪೂಜೆ ಪುನಸ್ಕಾರ ಮಾಡಬಾರದು ಎಂದು ಒಂದು ಸಾಲಿನ ನಿರ್ಣಯ ಘೋಷಣೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.

ಇನ್ಮುಂದೆ ಪಬ್, ಬಾರ್ ಗೆ ಭೇಟಿ ಕೊಟ್ಟು ಜನ ಸಂದಣಿ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ ಸುಧಾಕರ್, ಕೊರೊನಾ ಭೀತಿ ನಡುವೆಯೂ ಸುಳೇಭಾವಿ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ನಡೆದದ್ದು ಸರಿಯಲ್ಲ‌. ಈ ಬಗ್ಗೆ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದರು.

ಮನೆಯಲ್ಲಿ ಪ್ರತ್ಯೇಕವಾಗಿ ಇರುವವರ ಜವಾಬ್ದಾರಿ ಬೀಟ್ ಪೊಲೀಸರ ಹೆಗಲಿಗೆ

ಮನೆಯಲ್ಲಿ ಪ್ರತ್ಯೇಕವಾಗಿ ಇರುವವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಬೀಟ್ ಪೊಲೀಸರ ನೀಡಲಾಗಿದೆ. ಅವರು ತಪ್ಪಿಸಿಕೊಂಡ ಹೋಗದ ರೀತಿಯಲ್ಲಿ ಬೀಟ್ ಪೋಲೀಸರು ನೋಡಿಕೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು