ಶುಕ್ರವಾರ, ಮಾರ್ಚ್ 5, 2021
24 °C

ಕರ್ನಾಟಕದಲ್ಲಿ ಅಬಕಾರಿ ಸುಂಕ ಶೇ 17 ಹೆಚ್ಚಳ: ಮದ್ಯ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ಯ ಮಾರಾಟ– ಸಾಂಕೇತಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿಯೂ ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಮದ್ಯದ ಮೇಲೆ ಹೆಚ್ಚುವರಿಯಾಗಿ ಶೇ 11ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಬಜೆಟ್‌ನಲ್ಲಿ ಅಬಕಾರಿ ಸುಂಕ ಶೇ 6ರಷ್ಟು ಹೆಚ್ಚಿಸಲಾಗಿತ್ತು. ಇದರಿಂದ ಒಟ್ಟು ಸುಂಕ ಶೇ 17ರಷ್ಟು ಹೆಚ್ಚಳವಾದಂತಾಗಲಿದೆ. 

ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್‌  ಜಾರಿಯಾಗುವ ಜತೆಗೆ ಸಡಿಲಿಕೆಯ ಭಾಗವಾಗಿ ಸೋಮವಾರದಿಂದ ಮದ್ಯ ಮಾರಾಟ ಮಳಿಗೆಗಳು ತೆರೆದಿವೆ. ಮದ್ಯದ ದರ ಶೇ 25ರಷ್ಟು ಏರಿಕೆ ಮಾಡಿದ್ದ ಆಂಧ್ರ ಪ್ರದೇಶ ಸರ್ಕಾರ, ಮಂಗಳವಾರ ಮತ್ತೆ ಶೇ 50ರಷ್ಟು ದರ ಹೆಚ್ಚಳ ಪ್ರಕಟಿಸಿದೆ. ಈ ಮೂಲಕ ಆಂಧ್ರ ಪ್ರದೇಶದಲ್ಲಿ ಮದ್ಯದ ಬೆಲೆ ಶೇ 75ರಷ್ಟು ಹೆಚ್ಚಳವಾದಂತಾಗಿದೆ. 

ದೇಶದಾದ್ಯಂತ ಹಲವು ರಾಜ್ಯ ಸರ್ಕಾರಗಳು ಮದ್ಯದ ಮಾರಾಟದ ಮೇಲೆ ತೆರಿಗೆ ಹೆಚ್ಚಳ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿವೆ. 

ದೆಹಲಿ ಸರ್ಕಾರ, ಮದ್ಯ ಖರೀದಿಗೆ ಸಾಲುಗಟ್ಟಿರುವ ಜನಸಂದಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶೇಷ ಕೊರೊನಾ ಶುಲ್ಕದ ಹೆಸರಿನಲ್ಲಿ ಶೇ 70ರಷ್ಟು ತೆರಿಗೆ ವಿಧಿಸಿರುವ ನಿರ್ಧಾರ ಪ್ರಕಟಿಸಿತು. ಮದ್ಯಗಳ ಗರಿಷ್ಠ ಮಾರಾಟ ಬೆಲೆಯ ಮೇಲೆ ಶೇ 70ರಷ್ಟು ತೆರಿಗೆ ವಿಧಿಸಿರುವುದರಿಂದ ರಿಟೇಲ್‌ ಮದ್ಯದ ದರ ಭಾರೀ ಏರಿಕೆಯಾದಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು