ಭಾನುವಾರ, ಸೆಪ್ಟೆಂಬರ್ 26, 2021
21 °C
ಕೊರೊನಾ ಚಿಕಿತ್ಸೆ

ಖಾಸಗಿ ಆಸ್ಪತ್ರೆಗಳೊಂದಿಗೆ ಮತ್ತೆ ಸಭೆ: ಶೇ 50 ಹಾಸಿಗೆ ಬಿಟ್ಟುಕೊಡಲು ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತ್ವರಿತವಾಗಿ ಫಲಿತಾಂಶ ನೀಡುವ ಆ್ಯಂಟಿಜೆನ್ ಪರೀಕ್ಷೆ ಶನಿವಾರದಿಂದ ನಗರದಲ್ಲಿ ಆರಂಭವಾಗಲಿದ್ದು, ಕೋವಿಡ್‌ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಇನ್ನು ಮುಂದೆ ವೇಗ ಸಿಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಬಂದಿರುವ 1 ಲಕ್ಷ ಆ್ಯಂಟಿಜೆನ್ ಕಿಟ್‌ಗಳ ಪೈಕಿ 50 ಸಾವಿರವನ್ನು ನಗರದಲ್ಲಿ ಹಾಗೂ ಉಳಿದವನನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿ ಬಳಸಲಾಗುವುದು. ವಾರದೊಳಗೆ ಇನ್ನೂ ಎರಡು ಲಕ್ಷ ಕಿಟ್‌ಗಳು ಬರಲಿವೆ’ ಎಂದರು.

ಇದನ್ನೂ ಓದಿ: 

‘ಆ್ಯಂಟಿಜೆನ್‌ ಪರೀಕ್ಷೆಯಿಂದ ಕೇವಲ 10 ನಿಮಿಷದಲ್ಲಿ ವರದಿ ಸಿಗುತ್ತದೆ. ಪಾಸಿಟಿವ್‌ ವರದಿ ಬಂದರೆ ಸಾಂಪ್ರದಾಯಿಕ ಕೊರೊನಾ ಪರೀಕ್ಷೆ ಮಾಡಿಸಬೇಕು, ನೆಗೆಟಿವ್ ಬಂದರೆ ನೆಮ್ಮದಿಯಿಂದ ಇರಬಹುದು’ ಎಂದು ಹೇಳಿದರು.‌

ಹಾಸಿಗೆ–ಆತಂಕ ಬೇಡ: ‘ಖಾಸಗಿ ಆಸ್ಪತ್ರೆಗಳೊಂದಿಗೆ ಶುಕ್ರವಾರ ಮತ್ತೊಮ್ಮೆ ಸಭೆ ನಡೆಸಲಾಗಿದ್ದು, ಶೇ 50ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಲು ಅವುಗಳು ಒಪ್ಪಿಕೊಂಡಿವೆ. ಇವುಗಳ ಬಗ್ಗೆ ಕೇಂದ್ರೀಕೃತ ಮಾಹಿತಿ ಕೊಡುವ ವ್ಯವಸ್ಥೆ ಒಂದೆರಡು ದಿನಗಳಲ್ಲಿ ಆರಂಭವಾಗಲಿದೆ. ಸದ್ಯ ನಗರದ ವಿವಿಧ ಆಸ್ಪತ್ರೆಗಳಲ್ಲಿ 2,391 ಹಾಸಿಗೆಗಳು ಲಭ್ಯ ಇವೆ’ ಎಂದು ಡಾ.ಸುಧಾಕರ್‌ ಹೇಳಿದರು.

ಮನೆಯಲ್ಲೇ ಸುರಕ್ಷಿತವಾಗಿರಿ: ‘ಯಾವುದೇ ರೋಗ ಲಕ್ಷಣ ಇಲ್ಲದವರಿಗೆ ಕೋವಿಡ್‌ ಸೋಂಕು ತಗುಲಿದರೆ ಅವರು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದು ಸೋಂಕಿನಿಂದ ಮುಕ್ತರಾಗಬಹುದು. ಭಯಪಡುವ ಅಗತ್ಯವೇ ಇಲ್ಲ. ಹೀಗೆ ಮಾಡಿದ್ದೇ ಆದರೆ ಆಸ್ಪತ್ರೆಗಳಲ್ಲಿನ ಒತ್ತಡ ನಿವಾರಣೆಯಾಗುತ್ತದೆ’ ಎಂದು ಶ್ವಾಸಕೋಶ ತಜ್ಞ ಡಾ.ಸತೀಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು