ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್ಸ್‌: ಫೈನಲ್ ಹಂತಕ್ಕೆ ಪ್ರಣತಿ ಲಗ್ಗೆ

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌ (ಪಿಟಿಐ): ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ನ ಮಹಿಳಾ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಅರುಣಾ ರೆಡ್ಡಿ ನಿರಾಸೆ ಮೂಡಿಸಿದರು. ಆದರೆ ಪ್ರಣತಿ ನಾಯಕ್ ಫೈನಲ್‌ ಸುತ್ತು ಪ್ರವೇಶಿಸಿದರು.

ವಾಲ್ಟ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಪ್ರಣತಿ ನಾಯಕ್‌ ಎಂಟನೇ ಸ್ಥಾನ ಗಳಿಸಿದರೆ ಪ್ರಣತಿ ದಾಸ್‌ ಅರ್ಹತಾ ಸುತ್ತಿನಲ್ಲಿ 18ನೇ ಸ್ಥಾನದೊಂದಿಗೆ ಫೈನಲ್‌ ಸುತ್ತು ಪ್ರವೇಶಿಸಿದರು.

ಕೈ ಹಿಡಿದ ಅದೃಷ್ಟ: ಪ್ರಣತಿ ನಾಯಕ್‌ ಅವರಿಗೆ ಇಲ್ಲಿ ಅದೃಷ್ಟ ಕೈ ಹಿಡಿದಿತ್ತು. ಅರ್ಹತಾ ಸುತ್ತಿನ ಮುಕ್ತಾಯಕ್ಕೆ ಅವರು ಒಂಬತ್ತನೆಯವರಾಗಿದ್ದರು. ಆದರೆ ಮೊದಲ ಮೂರು ಸ್ಥಾನಗಳು ಕೆನಡಾ ಪಾಲಾದ ಕಾರಣ ಪ್ರಣತಿಗೆ ಫೈನಲ್‌ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಿತು. ನಿಯಮಗಳ ಪ್ರಕಾರ ಒಂದು ದೇಶದಿಂದ ಇಬ್ಬರಿಗೆ ಮಾತ್ರ ಫೈನಲ್‌ ಪ್ರವೇಶಿಸಲು ಅವಕಾಶ ಇರುವುದರಿಂದ ಭಾರತದ ಜಿಮ್ನಾಸ್ಟ್‌ಗೆ ಅಕವಾಶದ ಬಾಗಿಲು ತೆರೆಯಿತು.

ಫೆಬ್ರುವರಿಯಲ್ಲಿ ನಡೆದಿದ್ದ ವಿಶ್ವಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಅರುಣಾ ಬುದ್ಧಾರೆಡ್ಡಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅದರೆ ಇಲ್ಲಿ 11ನೇ ಸ್ಥಾನ ಗಳಿಸಿದರು. ಅವರನ್ನು ಫೈನಲ್‌ ಸುತ್ತಿಗೆ ಕಾಯ್ದಿರಿಸಿದ ಎರಡನೇ ಜಿಮ್ನಾಸ್ಟ್‌ ಅಗಿ ಪರಿಗಣಿಸಲಾಗಿದೆ. ಮುಖ್ಯ ಸುತ್ತಿನಲ್ಲಿ ಯಾರಾದರೂ ಕಣದಿಂದ ನಿವೃತ್ತರಾದರೆ ಕಾಯ್ದಿರಿಸಿದ ಕ್ರೀಡಾಪಟುವಿಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ.

ಭಾನುವಾರ ನಡೆಯಲಿರುವ ಪ್ರಶಸ್ತಿ ಹಂತದ ಸ್ಪರ್ಧೆಯ ವಾಲ್ಟ್ ವಿಭಾಗದಲ್ಲಿ ಎಂಟು ಮಂದಿ ಸ್ಪರ್ಧಿಸಲಿದ್ದು ಆಲ್‌ರೌಂಡ್ ವಿಭಾಗದಲ್ಲಿ 18 ಮಂದಿ ಕಣಕ್ಕೆ ಇಳಿಯಲಿದ್ದಾರೆ.

ತಂಡಕ್ಕೆ ಏಳನೇ ಸ್ಥಾನ: ತಂಡ ವಿಭಾಗದಲ್ಲಿ ಭಾರತ ಏಳನೇ ಸ್ಥಾನ ಗಳಿಸಿತು. ಸ್ಪರ್ಧೆಯಲ್ಲಿ ಒಟ್ಟು ಎಂಟು ತಂಡಗಳು ಇದ್ದವು. ಭಾರತ ತಂಡದಲ್ಲಿ ಪ್ರಣತಿ ನಾಯಕ್‌, ಪ್ರಣತಿ ದಾಸ್ ಮತ್ತು ಅರುಣಾ ರೆಡ್ಡಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT