ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಎನ್.ಸಿ. ಅಯ್ಯಪ್ಪ

7

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಎನ್.ಸಿ. ಅಯ್ಯಪ್ಪ

Published:
Updated:

ವಿರಾಜಪೇಟೆ: ಕ್ರಿಕೆಟಿಗ ಹಾಗೂ ಬಿಗ್‌ಬಾಸ್ ಖ್ಯಾತಿಯ ಎನ್.ಸಿ. ಅಯ್ಯಪ್ಪ ಹಾಗೂ ಚಿತ್ರ ನಟಿ ಅನುಷಾ ಪೂವಮ್ಮ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಚಿತ್ರ ನಟಿ ಪ್ರೇಮಾ ಅವರ ಸಹೋದರ ಎನ್.ಸಿ. ಅಯ್ಯಪ್ಪ ಹಾಗೂ ನಟಿ ಅನುಷಾ ಅವರ ವಿವಾಹವು ಕೊಡವ ಸಂಪ್ರದಾಯದಂತೆ ಪಟ್ಟಣದಲ್ಲಿ ನಡೆಯಿತು.

ಶನಿವಾರ ರಾತ್ರಿ ಆರತಕ್ಷತೆ ನಡೆದಿತ್ತು. ಜಿಲ್ಲೆಯ ಕುಂಬಳದಾಳು ಗ್ರಾಮದ ನೆರವಂಡ ಚೆಟ್ಟಿಚಾ ಹಾಗೂ ಕಾವೇರಪ್ಪ ದಂಪತಿಯ ಪುತ್ರ ಅಯ್ಯಪ್ಪ ವೇಗದ ಬೌಲರ್‌ ಆಗಿ ರಣಜಿ ತಂಡದಲ್ಲಿ ಹೆಸರು ಮಾಡಿದ್ದರು.

ಸಮೀಪದ ಕೆದಮುಳ್ಳೂರು ಗ್ರಾಮದ ಮಾಳೇಟಿರ ದಿ. ಚಿನ್ನಪ್ಪ ಹಾಗೂ ಪುಷ್ಪಾ ದಂಪತಿ ಪುತ್ರಿ ಅನುಷಾ, ‘ಕರ್ವ’, ‘ಕಥಾವಿಚಿತ್ರ’, ‘ಲೈಫ್ ಸೂಪರ್’, ‘ಪಾನಿಪೂರಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಅಭಿನಯಿಸುತ್ತಿದ್ದಾರೆ.

ನವ ಜೋಡಿಯು ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ಚಿತ್ರರಂಗದ ಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಹರಸಿದರು.

ಎರಡು ವರ್ಷಗಳ ಹಿಂದೆ ಅಯ್ಯಪ್ಪ ಮತ್ತು ಅನುಷಾ ನಡುವೆ ಪರಿಚಯವಾಗಿ ಸ್ನೇಹವಾಗಿತ್ತು. ನಂತರ ಇಬ್ಬರೂ ಪ್ರೀತಿಸಿ ಕಳೆದ ವರ್ಷ ಬೆಂಗಳೂರಿನ ಕೊಡವ ಸಮಾಜದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !