ಶುಕ್ರವಾರ, ನವೆಂಬರ್ 22, 2019
23 °C

ಶಿವಾಜಿ ಚಿತ್ರಕ್ಕೆ ಅವಮಾನ: ಹಲ್ಲೆ

Published:
Updated:

ಮೂಡಿಗೆರೆ: ತಾಲ್ಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ತಲಗೂರು ಗ್ರಾಮದಲ್ಲಿ ಬೈಕಿನ ಮೇಲೆ ಚಿತ್ರಿಸಿದ್ದ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಅಸ್ಸಾಂ ಯುವಕನೊಬ್ಬನಿಗೆ ಸ್ಥಳೀಯ ಯುವಕರು ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ವೈರಲ್ ಆಗಿದೆ.

ಖಾಸಗಿ ಕಾಫಿತೋಟಕ್ಕೆ ಕೂಲಿಗಾಗಿ ವಲಸೆ ಬಂದಿರುವ ಅಸ್ಸಾಂನ ಮೂವರು ಯುವಕರು, ವಾರದ ರಜೆಯ ಸಲುವಾಗಿ ಭಾನುವಾರ ತಲಗೂರಿಗೆ ತೆರಳಿದ್ದರು. ಈ ಸಂದರ್ಭ ಸ್ಥಳೀಯ ವ್ಯಕ್ತಿಯೊಬ್ಬರ ಬೈಕಿನ ಮುಂಭಾಗದಲ್ಲಿ ಚಿತ್ರಿಸಿದ್ದ ಶಿವಾಜಿ ಚಿತ್ರದ ಮೇಲೆ ಯಾರೂ ಇಲ್ಲದನ್ನು ಗಮನಿಸಿ ಅಸ್ಸಾಂ ಯುವಕನೊಬ್ಬ ಉಗುಳಿದ್ದ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)