ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ವಿಘ್ನೇಶ್ವರನ್‌ ಹ್ಯಾಟ್ರಿಕ್‌

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಘ್ನೇಶ್ವರನ್‌ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಯಂಗ್‌ ಮುಸ್ಲಿಮ್ಸ್‌ ಎಫ್‌ಸಿ,ಬಿಡಿಎಫ್‌ಎ ಆಶ್ರಯದ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ತಂಡವು ಗೆದ್ದಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಯಂಗ್‌ ಮುಸ್ಲಿಮ್ಸ್‌ ಎಫ್‌ಸಿ ತಂಡವು ಯಂಗ್‌ ಜೆಮ್ಸ್‌ ಎಫ್‌ಸಿ ತಂಡವನ್ನು 9–0 ಗೋಲುಗಳಿಂದ ಮಣಿಸಿತು.

ವಿಜಯೀ ತಂಡದ ವಿಘ್ನೇಶ್ವರನ್‌ ಅವರು ಮೂರು , ಲಾರೆನ್ಸ್‌, ಕೆ. ಅರುಣ ಹಾಗೂ ಅಶೋಕ್‌ ಅವರು ತಲಾ ಎರಡು ಗೋಲು ಗಳಿಸಿದರು.

ದೇವನಹಳ್ಳಿ ಎಫ್‌ಸಿ ತಂಡವು ಬೆಂಗಳೂರು ಎಲ್ಲೋಸ್‌ ಎಫ್‌ಸಿ ತಂಡವನ್ನು 2–1 ಗೋಲುಗಳಿಂದ ಸೋಲಿಸಿತು. ದೇವನಹಳ್ಳಿ ತಂಡದ ಮಂಜು ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ಎಲ್ಲೋಸ್‌ ತಂಡದ ಸ್ಟೀಫನ್‌ ಒಂದು ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT