ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ– ಉಡುಪಿ ನಡುವೆ ಮೀಸಲು ಪೊಲೀಸ್ ಠಾಣೆ

16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿ: ಗೃಹ ಸಚಿವ ಬೊಮ್ಮಾಯಿ
Last Updated 1 ನವೆಂಬರ್ 2019, 15:14 IST
ಅಕ್ಷರ ಗಾತ್ರ

ಕುಮಟಾ: ‘ಉಡುಪಿ ಮತ್ತು ಕಾರವಾರ ನಡುವೆ ಕರ್ನಾಟಕ ಮೀಸಲು ಪೊಲೀಸ್ ಪಡೆಯ (ಕೆ.ಎಸ್.ಆರ್.ಪಿ) ಬೆಟಾಲಿಯನ್ ಠಾಣೆ ಸ್ಥಾಪಿಸಲಾಗುವುದು’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಅವರುಶುಕ್ರವಾರ ಭಟ್ಕಳದಿಂದ ಯಲ್ಲಾಪುರಕ್ಕೆ ಹೋಗುವ ಮಾರ್ಗಮಧ್ಯೆ ಕುಮಟಾಕ್ಕೆ ಭೇಟಿ ನೀಡಿದರು.ಇಲ್ಲಿನ ಪೊಲೀಸ್ ಠಾಣೆ ಹಾಗೂ ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿಸುದ್ದಿಗಾರರ ಜೊತೆಮಾತನಾಡಿದರು.

‘ಕರಾವಳಿ ಕಾವಲು ಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪೀಡ್ ಬೋಟ್‌ಗಳನ್ನುಒದಗಿಸಲಾಗುವುದು. ಈ ಸಲ ರಾಜ್ಯದಲ್ಲಿ ಒಂದು ಸಾವಿರ ಪಿ.ಎಸ್.ಐ ಹಾಗೂ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿಗೆಬಜೆಟ್‌ನಲ್ಲಿಅನುವು ಮಾಡಲಾಗುವುದು. ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ, ಸಾಮಾನ್ಯ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ ಅದನ್ನು ದಾಖಲಿಸಿಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆನ್‌ಲೈನ್ ಮೂಲಕವೂ ಈಗ ದೂರು ದಾಖಲಿಸಬಹುದಾಗಿದೆ’ ಎಂದರು.

ಕತಗಾಲ ಉಪ ಪೊಲೀಸ್ ಠಾಣೆ ಕಟ್ಟಡ ಕುಸಿಯುವ ಹಂತ ತಲುಪಿರುವ ಬಗ್ಗೆ ಜಿಲ್ಲಾ ಪಂಚಾಯ್ತಿ ಸದಸ್ಯ ಗಜಾನನ ಪೈ ಗಮನ ಸೆಳೆದರು.

ಹೊನ್ನಾವರದ ಪರೇಶ ಮೇಸ್ತ ಸಾವಿಗೆ ಸಂಬಂಧಿಸಿ ಈ ಹಿಂದೆ ಕುಮಟಾದಲ್ಲಿ ಉಂಟಾದ ಗಲಾಟೆಯಲ್ಲಿ ಸುಮಾರು 300 ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇವುಗಳವಾಪಸಾತಿಗೆ ಪರಿಶೀಲಿಸಿ ಎಂದು ಬಿ.ಜೆ.ಪಿ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ ಮಾರ್ಕಾಂಡೆ ಹಾಗೂ ಯುವ ಘಟಕದ ಅಧ್ಯಕ್ಷ ಹೇಮಂತ ಗಾಂವ್ಕರ್ ಮನವಿ ಸಲ್ಲಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ವಿಷಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿಶಾಸಕ ದಿನಕರ ಶೆಟ್ಟಿ, ಪಕ್ಷದ ಮುಖಂಡರಾದ ದಾಮೋದರ ನಾಯ್ಕ, ಜಿ.ಜಿ.ಹೆಗಡೆ, ಸುಧೀರ ಪಂಡಿತ, ಗಜಾನನ ಗುನಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಸಿ.ಪಿ.ಐ ಪರಮೇಶ್ವರ ಗುನಗಾ, ಪಿ.ಎಸ್.ಐ ಇ.ಸಿ.ಸಂಪತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT