ಹಾಲಿ ಹುದ್ದೆಯ ವೇತನ ಪಾವತಿಗೆ ಸಿ.ಎಸ್‌. ಸೂಚನೆ

7
ಬಡ್ತಿ ಮೀಸಲು ಪ್ರಕರಣ; 3–4 ತಿಂಗಳಿನಿಂದ ಸಮಸ್ಯೆ

ಹಾಲಿ ಹುದ್ದೆಯ ವೇತನ ಪಾವತಿಗೆ ಸಿ.ಎಸ್‌. ಸೂಚನೆ

Published:
Updated:

ಬೆಂಗಳೂರು: ಬಡ್ತಿ ಮೀಸಲು ಕಾಯ್ದೆ ರದ್ದುಪಡಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಅನ್ವಯ ಪರಿಣಾಮ ಹಿಂಬಡ್ತಿ– ಮುಂಬಡ್ತಿ ಪಡೆದ ನೌಕರರಿಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯ ವೇತನ ತಕ್ಷಣ ಪಾವತಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ (ಸಿ.ಎಸ್‌) ಟಿ.ಎಂ. ವಿಜಯಭಾಸ್ಕರ್‌ ಸೂಚಿಸಿದ್ದಾರೆ.

‘ಕೋರ್ಟ್‌ ತೀರ್ಪು ಪ್ರಕಾರ ನೌಕರರ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಕೆಲವು ಇಲಾಖೆಗಳಲ್ಲಿ ತತ್ಪರಿಣಾಮ ಕ್ರಮ (ಹಿಂಬಡ್ತಿ– ಮುಂಬಡ್ತಿ) ತೆಗೆದುಕೊಳ್ಳಲಾಗಿದೆ. ಇದರಿಂದ ಬಾಧಿತರಾದ ಕೆಲವು ಅಧಿಕಾರಿಗಳು ಮತ್ತು ನೌಕರರಿಗೆ 3–4 ತಿಂಗಳುಗಳಿಂದ ವೇತನ ಪಾವತಿ ಆಗಿಲ್ಲ’ ಎಂದು ಕೆಲವು ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಬಳಿ ಇತ್ತೀಚೆಗೆ ದೂರಿದ್ದರು. 

ಹಿಂಬಡ್ತಿ– ಮುಂಬಡ್ತಿ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ತಿಳಿಸಿರುವ ಸುಪ್ರೀಂ ಕೋರ್ಟ್‌, ವೇತನ ಪಾವತಿ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಿಲ್ಲ. ಅಲ್ಲದೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲೇ ವೇತನ ಬಿಡುಗಡೆ ಮಾಡಬಹುದು ಎಂದು ಅಡ್ವೊಕೇಟ್ ಜನರಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ತಕ್ಷಣ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !