ಮಂಗಳವಾರ, ಆಗಸ್ಟ್ 20, 2019
25 °C

ನಿಖಿಲ್‌ ಸೋಲಿಸಲು ರೇವಣ್ಣನ ನಿಂಬೆಹಣ್ಣು ಕೆಲಸ ಮಾಡಲಿದೆ: ಸಿ.ಟಿ. ರವಿ 

Published:
Updated:

ಹುಬ್ಬಳ್ಳಿ: ‘ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರ ಮಧ್ಯೆ ಸ್ಪರ್ಧೆ ಆರಂಭವಾಗಿದೆ. ನಿಖಿಲ್ ಸೋಲಿಸಲು ರೇವಣ್ಣ ಅವರ ನಿಂಬೆಹಣ್ಣು ಕೆಲಸ ಮಾಡಲಿದೆ’ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಕುಂದಗೋಳದ ರಾಯನಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ಅವರು ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 

‘ನಮ್ಮ ಪರಂಪರೆಯ ಪ್ರಕಾರ ಹಿರಿಯ ಮಗನಿಗೆ ಅಧಿಕಾರ ಸಿಗಬೇಕು, ಆದರೆ ಹಿರಿಯ ಮಗ ರೇವಣ್ಣ ಅವರಿಗೆ ಅನ್ಯಾಯ ಆಗಿದೆ. ಕುಮಾರಸ್ವಾಮಿಗೆ ಅಧಿಕಾರ ಸಿಕ್ಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಖರ್ಗೆ ಅವರನ್ನು ಸಿಎಂ ಮಾಡುವುದಿದ್ದರೆ 2013ರಲ್ಲೇ ಮಾಡಬೇಕಿತ್ತು. ಆದರೆ ಕೇವಲ 80 ಸೀಟು ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಖರ್ಗೆ ಸಿಎಂ ಆಗಬೇಕು ಎಂದು ಹೇಳುವುದು ಮೊಣಕೈಗೆ ತುಪ್ಪ ಹಚ್ಚುವ ಕೆಲಸ ಎಂದು ಟೀಕಿಸಿದರು.


ವಾಚಕರವಾಣಿಯಲ್ಲಿ ಪ್ರಕಟಗೊಂಡಿದ್ದ ಕಾರ್ಟೂನ್‌

 

Post Comments (+)