ಬೆಳಗಾವಿಯಲ್ಲಿ ದತ್ತ ಮಾಲೆ ಹಾಕಿಕೊಂಡ ಸಿ.ಟಿ. ರವಿ

7

ಬೆಳಗಾವಿಯಲ್ಲಿ ದತ್ತ ಮಾಲೆ ಹಾಕಿಕೊಂಡ ಸಿ.ಟಿ. ರವಿ

Published:
Updated:

ಬೆಳಗಾವಿ: ಇಲ್ಲಿನ ಗೋವಾವೇಸ್‌ ಬಳಿ ಇರುವ ದತ್ತ ಮಂದಿರದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಬುಧವಾರ ಬೆಳಿಗ್ಗೆ ಮಾಲೆ ಹಾಕಿಕೊಂಡರು.

‘ದತ್ತ ಮಾಲೆ ಅಭಿಯಾನ ಆರಂಭವಾಗಿದೆ. ಪ್ರತಿ ವರ್ಷ ನಾನು ಚಿಕ್ಕಮಗಳೂರಿನಲ್ಲಿದ್ದಾಗ ದತ್ತ ಮಾಲೆ ಹಾಕಿಕೊಳ್ಳುತ್ತಿದ್ದೆ. ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವುದರಿಂದ ಇಲ್ಲಿಯೇ ಮಾಲೆ ಹಾಕಿಕೊಂಡಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಚಿಕ್ಕಮಗಳೂರಿನಲ್ಲಿರುವ ದತ್ತ ಪೀಠವು ಸಂಪೂರ್ಣವಾಗಿ ಮುಕ್ತವಾಗಬೇಕು ಎನ್ನುವ ಉದ್ದೇಶದಿಂದ ದತ್ತ ಮಾಲೆ ಅಭಿಯಾನವನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದೇವೆ. ನ್ಯಾಯಾಲಯದಲ್ಲಿ ಹಾಗೂ ಜನತಾ ನ್ಯಾಯಾಲಯದಲ್ಲಿ ಸಂಪೂರ್ಣ ವಿಶ್ವಾಸವಿದ್ದು, ಆದಷ್ಟು ಬೇಗ ದತ್ತ ಪೀಠ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !