ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕುಲ್ಫಿಯಲ್ಲಿ ಬ್ಲೇಡ್ ಪತ್ತೆ; ಮಕ್ಕಳೇ ಎಚ್ಚರ!

ತಯಾರಕಾ ಘಟಕದ
Last Updated 15 ಫೆಬ್ರುವರಿ 2020, 13:37 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ಅವಂದೂರು ಮಹಿಳೆಯೊಬ್ಬರು ಕುಲ್ಫಿ ತಿನ್ನುವಾಗ ಬ್ಲೇಡ್‌ ಪತ್ತೆಯಾಗಿದೆ.

ಕುಲ್ಫಿ ತಿನ್ನುವಾಗ ಸ್ವಲ್ಪ ಎಚ್ಚರ ತಪ್ಪಿದ್ದರೂ ಆ ಮಹಿಳೆಯ ನಾಲಿಗೆಯೇ ಕತ್ತರಿಸಿ ಹೋಗುವ ಸಾಧ್ಯತೆಯಿತ್ತು. ಬೇಸಿಗೆಯೆಂದು ಮಕ್ಕಳಿಗೆ ಕುಲ್ಫಿ ಕೊಡಿಸುವಾಗ ಪೋಷಕರು ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಆಪತ್ತು ಖಚಿತ!

ಆವಂದೂರು ಗ್ರಾಮದಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿ ನೂರಾರು ಮಂದಿ ಸೇರಿದ್ದರು. ವಾಹನದಲ್ಲಿ ಬಂದಿದ್ದ ವ್ಯಕ್ತಿ ಕುಲ್ಫಿ ಮಾರಾಟ ಮಾಡುತ್ತಿದ್ದ. ಅದೇ ಗ್ರಾಮದ ರಮ್ಯಾ ಅವರು ಮೂರು ಕುಲ್ಫಿ ಖರೀದಿಸಿದ್ದರು. ಮನೆಗೆ ತೆರಳಿ ಮಕ್ಕಳಿಗೂ ಎರಡು ಕುಲ್ಫಿ ನೀಡಿ, ಅವರೂ ಒಂದನ್ನು ತಿನ್ನಲು ಆರಂಭಿಸಿದ್ದಾರೆ. ಆ ಮಹಿಳೆಗೆ ಏನೋ ನಾಲಿಗೆಗೆ ಗೀರಿದ ಅನುಭವವಾಗಿದೆ. ಅದನ್ನು ಪರಿಶೀಲಿಸಿದಾಗ ಚೂಪಾದ ಬ್ಲೇಡ್‌ ಪತ್ತೆಯಾಗಿದೆ.

ಕೊನೆಗೆ ಕುಲ್ಫಿ ಖರೀದಿಸಿದ ಸ್ಥಳಕ್ಕೆ ಬಂದು ನೋಡುವಾಗ ಕುಲ್ಫಿ ಮಾರಾಟಗಾರ ಅಲ್ಲಿ ಇರಲ್ಲಿಲ್ಲ. ಕೊನೆಗೆ ಕವರ್‌ ಪರಿಶೀಲಿಸಿದಾಗ ನಾಪೋಕ್ಲು ಘಟಕವೊಂದರಲ್ಲಿ ಈ ಕುಲ್ಫಿ ತಯಾರಾಗಿರುವುದು ಗೊತ್ತಾಗಿದೆ.

‘ಕುಲ್ಫಿಯನ್ನು ಪೂರ್ತಿ ತಿಂದಿದ್ದರೆ ನಾಲಿಗೆಯೇ ಕತ್ತರಿಸಿ ಹೋಗುತ್ತಿತ್ತು. ಸ್ವಲ್ಪದರಲ್ಲಿ ನಾನು ಬಾಚಾವ್‌’ ಎಂದು ಕುಲ್ಫಿ ಖರೀದಿಸಿದ ಮಹಿಳೆ ರಮ್ಯಾ ಹೇಳಿದರು.

‘ಹಾಲಿನ ಪ್ಯಾಕ್‌ ಅನ್ನು ಬ್ಲೇಡ್‌ನಿಂದ ಕತ್ತರಿಸಿ ಕುಲ್ಫಿಗೆ ಮಿಶ್ರಣ ಮಾಡುವಾಗ ಬ್ಲೇಡ್ ಹಾಲಿನಲ್ಲಿ ಸೇರಿಕೊಂಡಿರುವ ಸಾಧ್ಯತೆಯಿದೆ. ಹಾಲನ್ನು ಫಿಲ್ಟರ್ ಮಾಡಿ ತೆಗೆಯಬೇಕು. ಆದರೆ, ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ನಾಪೋಕ್ಲು ಕುಲ್ಫಿ ತಯಾರಕಾ ಘಟಕದ ಮಾಲೀಕ ಅಶ್ರಫ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT