ಸೋಮವಾರ, ಆಗಸ್ಟ್ 26, 2019
20 °C

ವಿದ್ಯುತ್‌ ಸ್ಪರ್ಶ: ತಾಯಿ, ಪುತ್ರಿ ಸಾವು

Published:
Updated:
Prajavani

ಅಥಣಿ: ತಾಲ್ಲೂಕಿನ ಶಿವನೂರ ಗ್ರಾಮದಲ್ಲಿ ಕೆಸರಾಗಿದ್ದ ಕೊಟ್ಟಿಗೆಗೆ ಹಾಕಲು ಜಲ್ಲಿಕಲ್ಲುಗಳನ್ನು ತರಲು ಬುಧವಾರ ಸಂಜೆ ಹೋಗಿದ್ದ ತಾಯಿ ಹಾಗೂ ಪುತ್ರಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾದರು.

ಪಾರ್ವತಿ ರೂಪನೂರ (68) ಮಗಳು ಕೃಷ್ಣಾಬಾಯಿ ಮಾಗ್ಮೋಡೆ (30) ಮೃತರು.

ಜಲ್ಲಿ ಕಲ್ಲುಗಳ ಬಳಿ ‌ವಿದ್ಯುತ್‌ ತಂತಿ ಬಿದ್ದಿತ್ತು. ಅದನ್ನು ಸರಿಸಲು ಹೋದಾಗ, ಅವರಿಗೆ ವಿದ್ಯುತ್‌ ಪ್ರವಹಿಸಿದೆ ಎಂದು ಸ್ಥಳೀಯರು ತಿಳಿಸಿದರು.

Post Comments (+)