‘ಗಿಫ್ಟ್‌’ ಆಸೆ ತೋರಿಸಿ ಹಣ ಕಿತ್ತ ವಿದೇಶಿಗ

ಮಂಗಳವಾರ, ಜೂನ್ 18, 2019
29 °C
ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ವಂಚನೆ

‘ಗಿಫ್ಟ್‌’ ಆಸೆ ತೋರಿಸಿ ಹಣ ಕಿತ್ತ ವಿದೇಶಿಗ

Published:
Updated:

ಬೆಂಗಳೂರು: ಲಂಡನ್‌ ಪ್ರಜೆಯ ಸೋಗಿನಲ್ಲಿ ನಗರದ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ, ದುಬಾರಿ ಬೆಲೆಯ ಗಿಫ್ಟ್‌ ಆಸೆ ತೋರಿಸಿ ₹ 95 ಸಾವಿರ ಪಡೆದು ವಂಚಿಸಿದ್ದಾನೆ.

ಆ ಸಂಬಂಧ ನಗರದ ಸೈಬರ್‌ ಕ್ರೈಂ ಠಾಣೆಗೆ ಯುವತಿ ದೂರು ನೀಡಿದ್ದಾರೆ.

‘ಜಾನ್ಸನ್ ಬ್ರೋನ್ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಯುವತಿಗೆ ಫ್ರೆಂಡ್ ರಿಕ್ವೆಸ್ಟ್‌ ಬಂದಿತ್ತು. ಅದಕ್ಕೆ ಯುವತಿ ಒಪ್ಪಿಗೆ ಸೂಚಿಸುತ್ತಿದ್ದಂತೆ, ಆರೋಪಿ ಚಾಟಿಂಗ್ ಮಾಡಲಾರಂಭಿಸಿದ್ದ. ‘ಲಂಡನ್‌ನಲ್ಲಿರುವ ಎಲ್‌.ಜಿ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದ. ಅದನ್ನು ನಂಬಿದ್ದ ಯುವತಿ, ಚಾಟಿಂಗ್ ಮುಂದುವರಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ದುಬಾರಿ ಬೆಲೆಯ ವಾಚ್, ಬ್ಯಾಗ್, ಚಪ್ಪಲಿ ಸೇರಿದಂತೆ ಹಲವು ವಸ್ತುಗಳ ಫೋಟೊವನ್ನು ಯುವತಿಗೆ ಕಳುಹಿಸಿದ್ದ ಆರೋಪಿ, ಅವುಗಳನ್ನೆಲ್ಲ ಉಡುಗೂರೆಯಾಗಿ ನೀಡುವುದಾಗಿ ಹೇಳಿದ್ದ. ವಿದೇಶಿ ಕರೆನ್ಸಿಯನ್ನೂ ಕೊಡುವುದಾಗಿ ಆಮಿಷವೊಡ್ಡಿದ್ದ. ಉಡುಗೊರೆಯನ್ನು ಭಾರತಕ್ಕೆ ಕಳುಹಿಸಲು ₹ 25 ಸಾವಿರ ಶುಲ್ಕವಾಗುತ್ತದೆ’ ಎಂದು ತಿಳಿಸಿದ್ದ. ಅದನ್ನು ನಂಬಿದ್ದ ಯುವತಿ, ಆತ ಸೂಚಿಸಿದ್ದ ಬ್ಯಾಂಕ್‌ನ ಖಾತೆಗೆ ಗೂಗಲ್ ಪೇ ಆ್ಯಪ್‌ ಮೂಲಕ ಮೇ 12ರಂದು ಹಣ ಹಾಕಿದ್ದರು.’ 


ಯುವತಿಯನ್ನು ನಂಬಿಸಲು ಆರೋಪಿ ಕಳುಹಿಸಿಕೊಟ್ಟಿದ್ದ ಗುರುತಿನ ಚೀಟಿ

‘ಹ್ಯಾರಿ ಮಿಕ್ ಎಂಬ ಹೆಸರು ಹೇಳಿಕೊಂಡು ಕಸ್ಟಮ್‌ ಅಧಿಕಾರಿಗಳ ಸೋಗಿನಲ್ಲಿ ಮೇ 13ರಂದು ಯುವತಿಗೆ ಕರೆ ಮಾಡಿದ್ದ ವ್ಯಕ್ತಿ, ‘ಲಂಡನ್‌ ಸ್ನೇಹಿತ ನಿಮಗೆ ಕಳುಹಿಸಿರುವ ಪಾರ್ಸಲ್ ದೆಹಲಿಗೆ ಬಂದಿದೆ. ಅದರಲ್ಲಿ ವಿದೇಶಿ ಕರೆನ್ಸಿ ಇದ್ದು, ಅದನ್ನು ಬಿಡಿಸಿಕೊಳ್ಳಲು ಶುಲ್ಕ ಪಾವತಿ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಿಮಿನಲ್ ಕೇಸ್‌ ದಾಖಲಿಸಿ ಬಂಧಿಸಲಾಗುವುದು’ ಎಂದಿದ್ದ. ಅದನ್ನೂ ನಂಬಿದ್ದ ಯುವತಿ, ಎರಡನೇ ಬಾರಿ ₹ 70 ಸಾವಿರ ಹಾಕಿದ್ದರು.’

‘ಮರುದಿನ ಪುನಃ ಕರೆ ಮಾಡಿದ್ದ ಆರೋಪಿ, ಮತ್ತೇ ₹ 2 ಲಕ್ಷ ಕೇಳಿದ್ದ. ಹಣ ಪಾವತಿ ಮಾಡಲು ತಯಾರಿ ನಡೆಸಿದ್ದ ಯುವತಿ, ಕೊನೆ ಗಳಿಗೆಯಲ್ಲಿ ಅನುಮಾನಗೊಂಡು ಸ್ನೇಹಿತರನ್ನು ವಿಚಾರಿಸಿದ್ದರು. ‘ಇದೊಂದು ವಂಚಕರ ಜಾಲ’ ಎಂದು ಗೆಳೆಯರೆಲ್ಲ ತಿಳಿಸಿದ್ದರು. ನಂತರವೇ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !