ಸೋಮವಾರ, ಸೆಪ್ಟೆಂಬರ್ 16, 2019
27 °C
ಅಕ್ರಮ ಹಣ ಪತ್ತೆ ಪ್ರಕರಣ

ಜಾರಿ ನಿರ್ದೇಶನಾಲಯದಿಂದ ಡಿ.ಕೆ. ಶಿವಕುಮಾರ್ ಬಂಧನ

Published:
Updated:

ಬೆಂಗಳೂರು: ನಾಲ್ಕು ದಿನಗಳ ವಿಚಾರಣೆ ಬಳಿಕ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳವಾರ ರಾತ್ರಿ ದೆಹಲಿಯಲ್ಲಿ ಬಂಧಿಸಿದ್ದಾರೆ.

ನವದೆಹಲಿಯ ಮನೆಗಳಲ್ಲಿ ದೊರೆತ ₹ 8.60 ಕೋಟಿಯಷ್ಟು ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ನಾಲ್ಕು ದಿನಗಳಿಂದ ಶಿವಕುಮಾರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಊಟದ ವಿರಾಮವನ್ನೂ ನೀಡದೆ ವಿಚಾರಣೆ ನಡೆಸಲಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ಬಂಧನ ಮಾಡದಂತೆ ರಕ್ಷಣೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮೆಮೊ (ಜ್ಞಾಪನಾ ಪತ್ರ) ಅನ್ನು ಶುಕ್ರವಾರವಷ್ಟೆ ಹೈಕೋರ್ಟ್‌ ವಜಾಗೊಳಿಸಿತ್ತು.

‘ದೆಹಲಿಯಲ್ಲಿ ದೊರೆತ ₹8.6 ಕೋಟಿ ಹಣ ನಮ್ಮದೇ. ಈ ವಿಚಾರದಲ್ಲಿ ಜಾರಿ ನಿರ್ದೇಶನಾಲಯದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧ. ಆದರೆ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ, ಇ.ಡಿ ಅಧಿಕಾರಿಗಳು ನನ್ನ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ’ ಎಂದು ಶಿವಕುಮಾರ್ ಇತ್ತಿಚೆಗೆ ಆರೋಪಿಸಿದ್ದರು.

ಇನ್ನಷ್ಟು...

ಡಿಕೆಶಿ ಅಣ್ಣನವರೇ ಕ್ಷಮಿಸಿ: ಶ್ರೀರಾಮುಲು

ಡಿ.ಕೆ. ಶಿವಕುಮಾರ್ ಬೆಂಬಲಕ್ಕೆ ನಿಂತ ಕಾಂಗ್ರೆಸ್

ಗಾಯದ ಮೇಲೆ ಬರೆ ಎಳೆದ ಹೈಕೋರ್ಟ್; ಶಾಸಕ ಡಿ.ಕೆ.ಶಿವಕುಮಾರ್ ಮೆಮೊ ವಜಾ

₹8.6 ಕೋಟಿ ಹಣ ನಮ್ಮದೇ, ಇ.ಡಿ ವಿಚಾರಣೆಗೆ ಹಾಜರಾಗುವೆ: ಡಿ.ಕೆ.ಶಿವಕುಮಾರ್‌

Post Comments (+)