ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್ ಸೆ.17ರವರೆಗೆ ಇ.ಡಿ.ವಶಕ್ಕೆ

Last Updated 13 ಸೆಪ್ಟೆಂಬರ್ 2019, 13:40 IST
ಅಕ್ಷರ ಗಾತ್ರ

ನವದೆಹಲಿ:ಡಿ.ಕೆ.ಶಿವಕುಮಾರ್‌ಇ.ಡಿ. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ನಡೆದ ವಿಚಾರಣೆಯಲ್ಲಿ ವಿಶೇಷ ನ್ಯಾಯಾಲಯ ಶಿವಕುಮಾರ್ ಅವರನ್ನುಮತ್ತೆ ಸೆ.17ರ ವರೆಗೆ ಇ.ಡಿ ವಶಕ್ಕೆ ನೀಡಿದೆ.

ಶಿವಕುಮಾರ್‌ ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಇಂದುಜಾಮೀನು ಅರ್ಜಿಯ ವಿಚಾರಣೆ ನಡೆಯಲಿಲ್ಲ. ಆದಾಗ್ಯೂ ನ್ಯಾಯಾಲಯ ಜಾಮೀನು ಅರ್ಜಿ ಕುರಿತಂತೆ ಸೋಮವಾರದ ಒಳಗೆ ಆಕ್ಷೇಪ ಸಲ್ಲಿಸುವಂತೆ ಇ.ಡಿ. ಅಧಿಕಾರಿಗಳಿಗೆ ಸೂಚನೆ ನೀಡಿತು.

ಆರೋಗ್ಯಕ್ಕೆ ಮೊದಲ ಆದ್ಯತೆ‌ ನೀಡಿ ವಿಚಾರಣೆ ನಡೆಸುವಂತೆ ಇ.ಡಿ. ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿತು.

ಡಿ.ಕೆ.ಶಿವಕುಮಾರ್‌ ಕುಟುಂಬ ಸದಸ್ಯರು ಒಟ್ಟಾರೆ 350ಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಅತಿಯಾದ ವ್ಯವಹಾರ ನಡೆಸಿರುವುದು ಕಂಡುಬಂದಿದೆ, ಬೇನಾಮಿ ಆಸ್ತಿಗಳು ಪತ್ತೆಯಾಗಿದ್ದು 377ಖಾತೆಗಳಿಂದ ಭಾರಿ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಆಗಿದೆ. ಇದಕ್ಕೆದಾಖಲೆಗಳು ಲಭ್ಯವಾಗಿರುವುದರಿಂದ ಹೆಚ್ಚಿನ ವಿಚಾರಣೆ ಆಗತ್ಯ ಎಂದು ಇ.ಡಿ ವಕೀಲರು ನ್ಯಾಯಾಲಯದಲ್ಲಿ ಬಲವಾಗಿ ವಾದ ಮಂಡಿಸಿದರು.

ಡಿ.ಕೆ. ಶಿವಕುಮಾರ್‌ ಅವರ 23 ವಯಸ್ಸಿನ ಮಗಳ ಹೆಸರಲ್ಲೂ ಸಾಕಷ್ಟು ಆಸ್ತಿ ಇದೆ. 800 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದ್ದು ವಿಚಾರಣೆಗಾಗಿ ಮತ್ತೆ ಐದು ದಿನ ವಶಕ್ಕೆ ನೀಡಬೇಕು. ಇವರು ಪ್ರಭಾವಿ, ಹಣ ಇರುವ ವ್ಯಕ್ತಿ. ತನಿಖೆಗೆ ಅಡ್ಡಿ ಪಡಿಸುವ‌ ರೀತಿ ಬೆಂಬಲಿಗರೂ ಪ್ರತಿಭಟನೆ ನಡೆಸಿ ಗಮನ ಸೆಳೆಯುತ್ತಿರುವುದು ಕಂಡುಬಂದಿದ್ದು ವಿಚಾರಣೆಗಾಗಿಇ.ಡಿ.ಕಸ್ಟಡಿಗೆ ನೀಡಬೇಕು ಎಂದು ಇ.ಡಿ. ಪರ ವಕೀಲ ನಟರಾಜನ್ ಹೇಳಿದರು.

ಡಿ.ಕೆ.ಶಿವಕುಮಾರ್‌ ಅವರನ್ನು ಅಗೌರವದಿಂದ‌ ನೋಡಿಕೊಂಡು ಕಾನೂನು ಉಲ್ಲಂಘನೆ ಮಾಡಲಾಗಿದೆ. ಬಂಧನಕ್ಕೆ‌ ಮೊದಲೂ ಸತತವಾಗಿ ವಿಚಾರಣೆ‌ ನಡೆಸಿ ಇದುವರೆಗೂ 120 ಗಂಟೆಗೂ‌ ಅಧಿಕ ಅವಧಿಗೆ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಂಬಂಧವಿಲ್ಲದ ಆದಾಯ ತೆರಿಗೆ ಇಲಾಖೆಯ ಪ್ರಕರಣವನ್ನೂ ಈಗ ವಿಚಾರಣೆಗೆ ಒಳಪಡಿಸಲಾಗಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು, ನಿತ್ಯವೂ ಡಿಕೆಶಿ ಅವರನ್ನು ವಿಚಾರಣೆಗೆ ಒಳಪಡಿಸುವುದನ್ನು ರೂಢಿ‌ ಮಾಡಿಕೊಳ್ಳಲಾಗಿದೆ. ಇದು ಸೂಕ್ತವಲ್ಲ ಎಂದು ಶಿವಕುಮಾರ್ ಪರ ವಕೀಲ ಅಭಿಷೇಕ್‌ ಮನು ಸಿಂಗ್ವಿ ನ್ಯಾಯಾಲಯ ವಾದ ಮಂಡಿಸಿದರು.

ವಾದ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಲಯಡಿ.ಕೆ. ಶಿವಕುಮಾರ್‌ ಅವರನ್ನು ಸೆ.17ರವರೆಗೆ ಇ.ಡಿ ಅಧಿಕಾರಿಗಳ ವಶಕ್ಕೆ ನೀಡಿತು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT