ಶನಿವಾರ, ಅಕ್ಟೋಬರ್ 19, 2019
22 °C

ತಿಹಾರ್‌ ಜೈಲಿಗೆ ಡಿ.ಕೆ.ಶಿವಕುಮಾರ್‌

Published:
Updated:

ನವದೆಹಲಿ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ‌ ಒಳಗಾಗಿರುವ‌‌ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ‌  ಡಿ.ಕೆ.ಶಿವಕುಮಾರ್‌ ಅವರನ್ನು ಇಲ್ಲಿನ ತಿಹಾರ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಶಿವಕುಮಾರ್ ಇ.ಡಿ. ವಶಕ್ಕೆ: ನ್ಯಾಯಾಲಯದಲ್ಲಿನ ವಾದ–ಪ್ರತಿವಾದದ ಪೂರ್ಣ ಮಾಹಿತಿ

ಅನಾರೋಗ್ಯದಿಂದಾಗಿ ರಾಮ್‌ ಮನೋಹರ್ ಲೋಹಿಯಾ(ಆರ್.ಎಂ.ಎಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರ್ ಆರೋಗ್ಯದಲ್ಲಿ ಸುಧಾರಣೆ‌ ಆಗಿದ್ದರಿಂದ ತಿಹಾರ್‌ ಜೈಲಿಗೆ  ಕರೆದೊಯ್ಯಲಾಗಿದೆ.

ಈಗಾಗಲೇ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಇ.ಡಿ.ಯಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಇರಿಸಲಾಗಿರುವ ‌ಬ್ಯಾರಕ್ ಸಂಖ್ಯೆ 7ರಲ್ಲೇ ಶಿವಕುಮಾರ್ ಅವರನ್ನು ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ... ದೇಶದ ಕಾನೂನಿಗಿಂತಲೂ ದ್ವೇಷದ ರಾಜಕಾರಣವೇ ಬಲಿಷ್ಠ: ಡಿಕೆಶಿ

Post Comments (+)