7
ಬೈಕ್‌ನಿಂದ ಜಾರಿ ಕೃಷ್ಣಾ ನದಿಗೆ ಬಿದ್ದ ಮೂರು ವರ್ಷದ ಮಗು

3 ವರ್ಷದ ಮಗಳೊಂದಿಗೆ ಅಪ್ಪನೂ ನೀರುಪಾಲು

Published:
Updated:
ದಸ್ತಗೀರ್ ಗೌಂಡಿ ಹಾಗೂ ಪುತ್ರಿ ಆನಮ್

ಬಾಗಲಕೋಟೆ: ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ, ಚಲಿಸುತ್ತಿದ್ದ ಬೈಕ್‌ನಿಂದ ಆಯತಪ್ಪಿ ನದಿಗೆ ಬಿದ್ದ ಮಗಳನ್ನು ರಕ್ಷಿಸಲು ಹೋದ ತಂದೆ ಕೂಡ ಆಕೆಯೊಂದಿಗೆ ನೀರು ಪಾಲಾಗಿದ್ದಾರೆ.

ಗಲಗಲಿ ಗ್ರಾಮದ ದಸ್ತಗೀರ್‌ ಗೌಂಡಿ (29) ಹಾಗೂ ಮೂರು ವರ್ಷದ ಮಗಳು ಆನಮ್‌ ಮೃತಪಟ್ಟವರು.

ಸೇತುವೆ ಮೇಲೆ ವೇಗವಾಗಿ ಚಲಿಸುತ್ತಿದ್ದ ವೇಳೆ ಬೈಕ್‌ನ ಚಕ್ರ ಎದುರಿನ ಗುಂಡಿಗೆ ಇಳಿಯುತ್ತಿದ್ದಂತೆಯೇ ಮೇಲೆ ಕುಳಿತಿದ್ದ ಆನಮ್‌ ಪುಟಿದು ನದಿಯಲ್ಲಿ ಬಿದ್ದಿದ್ದಾಳೆ. ಮಗಳನ್ನ ರಕ್ಷಿಸಲು ನದಿಗೆ ಹಾರಿದ ದಸ್ತಗೀರ್ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಮೀನುಗಾರರ ಸಹಾಯದಿಂದ ಎರಡೂ ಶವಗಳನ್ನು ಹೊರತೆಗೆಯಲಾಗಿದೆ.

ಸೇತುವೆ ಮೇಲೆ ತಡೆಗೋಡೆ ಇಲ್ಲದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !