ವಿಜ್ಞಾನ ವಸ್ತು ಪ್ರದರ್ಶನ: ದಕ್ಷಿಣಕನ್ನಡ ಜಿಲ್ಲೆಗೆ ಅತಿ ಹೆಚ್ಚು ಪ್ರಶಸ್ತಿ

7

ವಿಜ್ಞಾನ ವಸ್ತು ಪ್ರದರ್ಶನ: ದಕ್ಷಿಣಕನ್ನಡ ಜಿಲ್ಲೆಗೆ ಅತಿ ಹೆಚ್ಚು ಪ್ರಶಸ್ತಿ

Published:
Updated:
Deccan Herald

ಸೇಡಂ: ಇಲ್ಲಿನ ಮಾತೃಛಾಯ ಕಾಲೇಜಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದಕ್ಷಿಣಕನ್ನಡ ಜಿಲ್ಲೆ ವಿದ್ಯಾರ್ಥಿಗಳು ಅತಿ ಹೆಚ್ಚು ಅಂದರೆ; 25 ಪ್ರಶಸ್ತಿಗಳನ್ನು ಬಾಚಿಕೊಂಡರು.

ನಂತರದ ಸ್ಥಾನದಲ್ಲಿ ಕಲಬುರ್ಗಿಯ ಜಿಲ್ಲೆ (19 ಪ್ರಶಸ್ತಿ), ಮೂರನೇ ಸ್ಥಾನದಲ್ಲಿ ಬೆಂಗಳೂರು (16 ಪ್ರಶಸ್ತಿ) ವಿದ್ಯಾರ್ಥಿಗಳು ಮಿಂಚಿದರು.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕು ದೊಮ್ಮಸಂದ್ರ ಶ್ರೀ ಸರಸ್ವತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಚೈತನ್ಯ ಅವರು ‘ಸಾಂಪ್ರದಾಯಿಕ ಕೃಷಿ ಪದ್ಧತಿ’ ಕುರಿತು ನೀಡಿದ ಪ್ರದರ್ಶನ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಿತು. ಇದಕ್ಕೆ ತಂದೆ ಅಶ್ವತ್ಥನಾರಾಯಣ (ಶಾಲೆಯ ಶಿಕ್ಷಕ) ಅವರೇ ಮಾರ್ಗದರ್ಶಕ. ಈ  ಮಾದರಿ ಪ್ರದರ್ಶನದಲ್ಲಿ ಸಿರಿಧಾನ್ಯ, ಹಳೆಯ ಪದ್ಧತಿ ಕೃಷಿ ಉಳುಮೆ, ನೀರು ಸಂಗ್ರಹ, ಕಡಿಮೆ ನೀರಿನಿಂದ ಅತ್ಯಧಿಕ ಉತ್ಪಾದನೆ ಮಾಡುವ ಕೌಶಲ ಸೇರಿದಂತೆ ವಿವಿಧ ಅಂಶಗಳು ಒಳಗೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !