ದೇವರ ವಿಗ್ರಹಗಳ ಭಗ್ನ, ಕಳವು

7

ದೇವರ ವಿಗ್ರಹಗಳ ಭಗ್ನ, ಕಳವು

Published:
Updated:

ಕೊಪ್ಪ (ಮಂಡ್ಯ): ಸಮೀಪದ ಚುಂಚೇಗೌಡನದೊಡ್ಡಿ, ಪಣ್ಣೆದೊಡ್ಡಿ ಮತ್ತು ಬೆಳತೂರು ಗೇಟ್‌ನಲ್ಲಿರುವ ವಿವಿಧ ದೇಗುಲಗಳ ದೇವರ ಮೂರ್ತಿಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಭಗ್ನಗೊಳಿಸಿ ಒಂದು ಮೂರ್ತಿಯನ್ನು ಕದ್ದೊಯ್ದಿದ್ದಾರೆ.

ಚುಂಚೇಗೌಡನದೊಡ್ಡಿ ಗ್ರಾಮದ ಪಟ್ಟಲದಮ್ಮ ದೇಗುಲದ ಬಾಗಿಲು ಬೀಗ ಮುರಿದು ಗರ್ಭಗುಡಿಯಲ್ಲಿದ್ದ ಪಟ್ಟಲದಮ್ಮ ದೇವಿಯ ಮೂಲ ವಿಗ್ರಹವನ್ನು ವಿರೂಪಗೊಳಿಸಿ ಕತ್ತು ಕತ್ತರಿಸಿ, ರುಂಡ ಮತ್ತು ಮುಂಡವನ್ನು ಬೇರೆ ಮಾಡಿ ರುಂಡವನ್ನು ಜಮೀನೊಂದರಲ್ಲಿ ಎಸೆದಿದ್ದಾರೆ. ಮುಂಡವನ್ನು ದೇಗುಲದ ಮುಂಭಾಗ ಇರಿಸಿ ಹುಚ್ಚಾಟ ಮೆರೆದಿದ್ದಾರೆ.

ಪಣ್ಣೆದೊಡ್ಡಿ ಗ್ರಾಮದ ಗೇಟ್‌ನಲ್ಲಿರುವ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು ಗರ್ಭಗುಡಿಯಲ್ಲಿದ್ದ ಆಂಜನೇಯ ವಿಗ್ರಹವನ್ನು ಹೊತ್ತೊಯ್ದಿದ್ದಾರೆ. ಬೆಳತೂರು ಗೇಟ್‌ನಲ್ಲಿರುವ ಶನಿಮಹಾತ್ಮ ದೇಗುಲದ ತ್ರಿಶೂಲವನ್ನು ಮರಿದು ದೇಗುಲದ ಹುತ್ತಕ್ಕೆ ಚುಚ್ಚಿ, ದೇಗುಲಕ್ಕೆ ಕಲ್ಲಿನಿಂದ ಹೊಡೆದಿದ್ದಾರೆ.

ದೇವರ ಮೂರ್ತಿಯನ್ನು ವಿರೂಪಗೊಳಿಸಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !