ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾನ್ಸ್‌, ಸಂಗೀತ ಸ್ಪರ್ಧೆಗೆ ಆಡಿಷನ್

Last Updated 7 ಜೂನ್ 2019, 19:45 IST
ಅಕ್ಷರ ಗಾತ್ರ

ನಗರದ ಡಾನ್ಸ್ ಮತ್ತು ಸಂಗೀತ ಶಾಲೆ ನಾಟ್ಯ ನಿಸಾದಾ ಜುಲೈನಲ್ಲಿ ರಾಷ್ಟ್ರೀಯ ಮಟ್ಟದ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಸ್ಪರ್ಧೆ‘ಭರತ ನಾಟ್ಯ ನಿಶಾಥ ಮಹೋತ್ಸವ–2019’ ಮೊದಲ ಆವೃತ್ತಿ ಏರ್ಪಡಿಸಿದೆ.

ಜುಲೈ 11 ಮತ್ತು 12ರಂದು ಎರಡು ದಿನ ಜೆ.ಸಿ. ರಸ್ತೆಯ ನಯನ ಸಭಾಂಗಣದಲ್ಲಿ ನಡೆಯುವ ಸ್ಪರ್ಧೆಯಲ್ಲಿ ನಾನಾ ರಾಜ್ಯಗಳ ಕಲಾವಿದರು ಭಾಗವಹಿಸಲಿದ್ದಾರೆ. ಡಾನ್ಸ್‌, ಸಂಗೀತ ಸ್ಪರ್ಧೆಗೆ ಆಡಿಷನ್ ಆರಂಭವಾಗಿದೆ.

ನೃತ್ಯ ಸ್ಪರ್ಧೆಯ ವಿಜೇತರಿಗೆ‘ಭರತ ನಾಟ್ಯ ವ್ಯಾಸ’ ಪ್ರಶಸ್ತಿ ಮತ್ತು ಸಂಗೀತ ಸ್ಪರ್ಧೆಯ ವಿಜೇತರಿಗೆ ‘ಭರತ ನಾದ ವ್ಯಾಸ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇದೇ ಸಂದರ್ಭದಲ್ಲಿದ ಹೌಸ್ ಇನ್‌ ಅರ್ಥ್‌ ಟು ಲಿವ್‌ ಆ್ಯಂಡ್‌ ಲವ್‌ ಫೌಂಡೇಶನ್‌ (ಹೆಲ್‌ ಫೌಂಡೇಶನ್‌) ಸಹಭಾಗಿತ್ವದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಗಣ್ಯರಿಗೆ ‘ಭಾರತ ಮಾಣಿಕ್ಯ ಪ್ರಶಸ್ತಿ’ ನೀಡಲಾಗುವುದು.

ಡಾನ್ಸ್‌ ಮತ್ತು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸುವ ಆಡಿಷನ್‌ದಲ್ಲಿ ಪಾಲ್ಗೊಳ್ಳಲು ಬಯಸುವವರು, ವೆನ್ನಿಲಾ ವಸಂತಕುಮಾರ್‌ ಅವರನ್ನು (ಮೊಬೈಲ್‌: 7349155152) ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT