ನಟ ದರ್ಶನ್ ಕಾರು ಅಪಘಾತ: ಆರೋಪಪಟ್ಟಿ ಸಲ್ಲಿಕೆ

7

ನಟ ದರ್ಶನ್ ಕಾರು ಅಪಘಾತ: ಆರೋಪಪಟ್ಟಿ ಸಲ್ಲಿಕೆ

Published:
Updated:

ಮೈಸೂರು: ನಟ ದರ್ಶನ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣದಲ್ಲಿ ಕಾರು ಚಾಲಕ ಆಂಟನಿ ರಾಯ್‌ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ವಿ.ವಿ ಪುರಂ ಸಂಚಾರ ಠಾಣೆ ಪೊಲೀಸರು 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಸೆ. 24ರಂದು ಮುಂಜಾನೆ ನಗರದ ಹೊರವರ್ತುಲ ರಸ್ತೆಯಲ್ಲಿ ಈ ಅಪಘಾತ ನಡೆದಿತ್ತು. ಕಾರಿನಲ್ಲಿ ನಾಲ್ವರು ಮಾತ್ರ ಪಯಣಿಸುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ, ಪೊಲೀಸರು ಸಲ್ಲಿಸಿರುವ ಜಾರ್ಜ್‌ ಶೀಟ್‌ನಲ್ಲಿ ಐವರು ಪ್ರಯಾಣ ಮಾಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ನಟರಾದ ದರ್ಶನ್‌, ದೇವರಾಜ್, ಪ್ರಜ್ವಲ್ ದೇವರಾಜ್, ಚಾಲಕ ಆಂಟನಿ ರಾಯ್ ಹಾಗೂ ದರ್ಶನ್‌ ಸ್ನೇಹಿತ ಪ್ರಕಾಶ್‌ ಇದ್ದರು ಎಂದು ನಮೂದಿಸಲಾಗಿದೆ.

ದರ್ಶನ್‌ ಬರಬೇಕು

ಸಾಕ್ಷಿ ಹೇಳಲು ನಟ ದರ್ಶನ್‌ ಸೇರಿದಂತೆ ಸಹ ಪ್ರಯಾಣಿಕರು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

ಚಾಲಕ ಆಂಟನಿ ರಾಯ್‌ ತಪ್ಪೊಪ್ಪಿಕೊಂಡರೆ ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬಹುದು. ಆದರೆ, ಸಾಕ್ಷಿ ಹೇಳುವುದು ಅನಿವಾರ್ಯ ಎಂದು ಹಿರಿಯ ವಕೀಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !