ದಸರಾ ಕ್ರೀಡಾಕೂಟದ ಕಬಡ್ಡಿ ಟೂರ್ನಿ; ಮೈಸೂರು ತಂಡಕ್ಕೆ ನಿರಾಸೆ

7

ದಸರಾ ಕ್ರೀಡಾಕೂಟದ ಕಬಡ್ಡಿ ಟೂರ್ನಿ; ಮೈಸೂರು ತಂಡಕ್ಕೆ ನಿರಾಸೆ

Published:
Updated:
Deccan Herald

ಮೈಸೂರು: ಉತ್ತಮ ಆಟವಾಡಿದ ಎಚ್‌ಎಎಲ್‌ ಮತ್ತು ವಿಜಯ ಬ್ಯಾಂಕ್ ತಂಡದವರು ದಸರಾ ಕ್ರೀಡಾಕೂಟದ ಕಬಡ್ಡಿ ಟೂರ್ನಿಯ ಪುರುಷರ ವಿಭಾಗದ ಪಂದ್ಯಗಳಲ್ಲಿ ಗೆಲುವು ಪಡೆದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಲೀಗ್‌ ಪಂದ್ಯದಲ್ಲಿ ಎಚ್‌ಎಎಲ್‌ 24–20 ರಲ್ಲಿ ಮೈಸೂರು ಜಿಲ್ಲಾ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ಮೈಸೂರು 13–5 ರಲ್ಲಿ ಭಾರಿ ಮುನ್ನಡೆ ಪಡೆದಿತ್ತು. ಆದರೆ ಎರಡನೇ ಅವಧಿಯಲ್ಲಿ ರೈಡಿಂಗ್‌ ಮತ್ತು ಕ್ಯಾಚಿಂಗ್‌ನಲ್ಲಿ ಮಿಂಚಿದ ಎಚ್‌ಎಎಲ್ ತಂಡ ರೋಚಕ ಜಯ ತನ್ನದಾಗಿಸಿಕೊಂಡಿತು.

ವಿಜಯ ಬ್ಯಾಂಕ್‌ ತಂಡದವರು 38–17 ರಲ್ಲಿ ದಕ್ಷಿಣ ಕನ್ನಡದ ವಿರುದ್ಧ; ಕೊಡಗು ತಂಡ 32–22 ರಲ್ಲಿ ಮಂಡ್ಯ ವಿರುದ್ಧ ಜಯ ಸಾಧಿಸಿತು.

ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಮಾತಾ ತಂಡ 28–25 ರಲ್ಲಿ ಧಾರವಾಡ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 17–13 ರಲ್ಲಿ ಮುನ್ನಡೆ ಸಾಧಿಸಿತ್ತು.

ದಕ್ಷಿಣ ಕನ್ನಡ ತಂಡ 43–21 ರಲ್ಲಿ ಮೈಸೂರು ವಿರುದ್ಧ ಭಾರಿ ಅಂತರದ ಗೆಲುವು ಪಡೆಯಿತು. ಆರಂಭದಿಂದಲೇ ಪಾಯಿಂಟ್‌ ಕಲೆಹಾಕತೊಡಗಿದ ವಿಜಯಿ ತಂಡ ಮೊದಲಾರ್ಧದಲ್ಲಿ 24–10 ರಲ್ಲಿ ಮುನ್ನಡೆ ಪಡೆದಿತ್ತು. ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಕೇಶವ ತಂಡ 36–14 ರಲ್ಲಿ ರಾಮನಗರ ವಿರುದ್ಧ ಸುಲಭ ಜಯ ಗಳಿಸಿತು.

ಮೈಸೂರು, ಬೆಳಗಾವಿ ತಂಡಗಳಿಗೆ ಗೆಲುವು: ಆತಿಥೇಯ ಮೈಸೂರು ಮತ್ತು ಬೆಳಗಾವಿ ತಂಡಗಳು ಕೊಕ್ಕೊ ಟೂರ್ನಿಯ ಪುರುಷರ ವಿಭಾಗದ ಲೀಗ್‌ ಪಂದ್ಯಗಳಲ್ಲಿ ಗೆಲುವು ಪಡೆದವು.

ಮೈಸೂರು ತಂಡ 18–8 ರಿಂದ ಧಾರವಾಡ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 7–4 ರಲ್ಲಿ ಮೇಲುಗೈ ಸಾಧಿಸಿತ್ತು. ಇತರ ಪಂದ್ಯಗಳಲ್ಲಿ ಬೆಳಗಾವಿ 12–10 ರಲ್ಲಿ ತಮಕೂರು ವಿರುದ್ಧ; ಬೆಂಗಳೂರು 15–9 ರಲ್ಲಿ ರಾಯಚೂರು ವಿರುದ್ಧ ಜಯ ಸಾಧಿಸಿತು.

ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ಧಾರವಾಡ 10–9 ರಲ್ಲಿ ಮೈಸೂರು ವಿರುದ್ಧ; ಬೆಳಗಾವಿ 9–1 ರಲ್ಲಿ ತುಮಕೂರು ವಿರುದ್ಧ ಗೆಲುವು ಪಡೆಯಿತು. ರಾಯಚೂರು ಮತ್ತು ಬೆಂಗಳೂರು ತಂಡಗಳ ನಡುವಿನ ಪಂದ್ಯ 6–6 ಪಾಯಿಂಟ್‌ಗಳಿಂದ ಸಮಬಲದಲ್ಲಿ ಕೊನೆಗೊಂಡಿತು.

ವಾಲಿಬಾಲ್: ದ.ಕನ್ನಡ, ಬೆಂಗಳೂರು ತಂಡಗಳಿಗೆ ಜಯ

ದಕ್ಷಿಣ ಕನ್ನಡ ಮತ್ತು ಬೆಂಗಳೂರು ತಂಡಗಳು ವಾಲಿಬಾಲ್ ಟೂರ್ನಿಯ ಪುರುಷರ ವಿಭಾಗದಲ್ಲಿ ಗುರುವಾರ ಆಡಿದ ಎರಡೂ ಪಂದ್ಯಗಳನ್ನು ಗೆದ್ದುಕೊಂಡವು.

ದಕ್ಷಿಣ ಕನ್ನಡ 19–25, 25–23, 25–18, 23–25, 15–10 ರಲ್ಲಿ ಶಿವಮೊಗ್ಗ ವಿರುದ್ಧ; 25–21, 25–22, 22–25, 25–23 ರಲ್ಲಿ ಕೋಲಾರ ವಿರುದ್ಧ ಜಯ ಸಾಧಿಸಿತು.

ಬೆಂಗಳೂರು ತಂಡ 20–25, 25–14, 25–20, 25–20 ರಲ್ಲಿ ತುಮಕೂರು ವಿರುದ್ಧ; 25–16, 25–22, 26–24 ರಲ್ಲಿ ಧಾರವಾಡ ವಿರುದ್ಧ ಗೆಲುವು ಪಡೆಯಿತು.

ಇತರ ಪಂದ್ಯಗಳಲ್ಲಿ ಧಾರವಾಡ 25–19, 25–22, 25–20 ರಲ್ಲಿ ಮೈಸೂರು ವಿರುದ್ಧ; ಶಿವಮೊಗ್ಗ ತಂಡ 19–25, 25–22, 17–25, 25–19, 15–8 ರಲ್ಲಿ ಬಳ್ಳಾರಿ ವಿರುದ್ಧ ಗೆದ್ದಿತು.

ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ಬಳ್ಳಾರಿ 25–13, 25–18,25–16 ರಲ್ಲಿ ಬಳ್ಳಾರಿ ವಿರುದ್ಧ; ಬೆಂಗಳೂರು 25–14, 25–6, 25–8 ರಲ್ಲಿ ರಾಯಚೂರು ವಿರುದ್ಧ; ದಕ್ಷಿಣ ಕನ್ನಡ 25–19, 25–17, 25–9 ರಲ್ಲಿ ಹಾಸನ ವಿರುದ್ಧ; ಮೈಸೂರು 25–19, 25–14, 25–19 ರಲ್ಲಿ ಧಾರವಾಡ ವಿರುದ್ಧ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !