ದಸರಾ: ಸಾವಿರ ರೂಪಾಯಿಗೆ ‘ಆಕಾಶ ಅಂಬಾರಿ’

7

ದಸರಾ: ಸಾವಿರ ರೂಪಾಯಿಗೆ ‘ಆಕಾಶ ಅಂಬಾರಿ’

Published:
Updated:

ಬೆಂಗಳೂರು: ಮೈಸೂರು ದಸರಾ ವೀಕ್ಷಣೆಗೆ ಬರುವ ದೇಶ ವಿದೇಶದ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಜಂಟಿಯಾಗಿ ಬೆಂಗಳೂರು– ಮೈಸೂರು ನಡುವೆ ಇದೇ 10ರಿಂದ 19ರ ವರೆಗೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಿವೆ.

ಈ ಸಂಬಂಧ ನಿಗಮ ಹಾಗೂ ಏರ್‌ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್‌ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ. ಕಳೆದ ಎರಡು ವರ್ಷ ಏಳು ಸೀಟುಗಳ ‘ಆಕಾಶ ಅಂಬಾರಿ’ ಎಂಬ ಕೆಸನ್ನಾ ವಿಮಾನಗಳ ಹಾರಾಟ ನಡೆಸಲಾಗಿತ್ತು. ಈ ವಿಮಾನಗಳು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದವು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವುದರಿಂದ ‍ಪ್ರವಾಸಿಗರಿಗೆ ಹೆಚ್ಚು ಅನುಕೂಲ ಆಗಲಿದೆ.

ಆಕಾಶ ಅಂಬಾರಿಯ ವಿಶೇಷಗಳು

*72 ಸೀಟುಗಳ ವಿಮಾನ

*ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 2.10ಕ್ಕೆ ವಿಮಾನ

*ಮೈಸೂರಿನಿಂದ ಪ್ರತಿದಿನ ಮಧ್ಯಾಹ್ನ 3.30ಕ್ಕೆ ವಿಮಾನ

*ಟಿಕೆಟ್‌ ದರ ₹999ರಿಂದ ₹15 ಸಾವಿರದ ವರೆಗೆ ಇರಲಿದೆ (ತೆರಿಗೆ ಹೊರತುಪಡಿಸಿ)

**

ಈ ಯೋಜನೆಯ ಲಾಭವನ್ನು ಹೆಚ್ಚಿನ ಜನರು ಪಡೆಯುವ ವಿಶ್ವಾಸ ಇದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಭವಿಷ್ಯದಲ್ಲಿ ಇದನ್ನು ಮುಂದುವರಿಸಲಾಗುತ್ತದೆ.
- ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !