ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಾಟಾ ಎಂಟ್ರಿ’ ಹೆಸರಲ್ಲಿ ₹ 1.38 ಕೋಟಿ ವಂಚನೆ

ಸುರತ್ಕಲ್ ಉದ್ಯಮಿಯಿಂದ ಸಿಐಡಿ ಸೈಬರ್ ಠಾಣೆಗೆ ದೂರು
Last Updated 15 ಆಗಸ್ಟ್ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ‘ಡಾಟಾ ಎಂಟ್ರಿ’ ಕೆಲಸ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ ₹ 1.38 ಕೋಟಿ ಪಡೆದು ವಂಚಿಸಿರುವ ಬಗ್ಗೆ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಡೇಟಿಂಗ್‌ ಇಂಡಿಯಾ ಡಾಟ್ ಆನ್‌ಲೈನ್’ ಹೆಸರಿನಲ್ಲಿ ನನ್ನನ್ನು ಸಂಪರ್ಕಿಸಿದ್ದ ಆರೋಪಿಗಳು, ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ಮಂಗಳೂರು ಸುರತ್ಕಲ್‌ನ ಉದ್ಯಮಿ ಉಮಾನಾಥ್ ಎಂಬುವರು ದೂರು ನೀಡಿದ್ದಾರೆ. 9 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಜೂನ್ 1ರಂದು ಉದ್ಯಮಿಯ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ನಾವು ಡೇಟಿಂಗ್‌ ಇಂಡಿಯಾ ಡಾಟ್ ಆನ್‌ಲೈನ್ ಜಾಲತಾಣದವರು. ಪ್ರತಿಷ್ಠಿತ ಕಂಪನಿಗಳ ಡಾಟಾ ಎಂಟ್ರಿ ಕೆಲಸ ಇದೆ. ನೀವು ಪ್ರವೇಶ ಶುಲ್ಕ ತುಂಬಿ ಒಪ್ಪಂದ ಮಾಡಿಕೊಂಡರೆ ಕೆಲಸ ಕೊಡಿಸುತ್ತೇವೆ’ ಎಂದು ಹೇಳಿದ್ದರು.’

‘ಆರೋಪಿಗಳ ಮಾತು ನಂಬಿದ್ದ ಉದ್ಯಮಿ, ಅವರು ಹೇಳಿದ್ದ ಬ್ಯಾಂಕ್‌ಗಳ ಖಾತೆಗೆ ಹಣ ಜಮೆ ಮಾಡಿದ್ದರು. ಪುನಃ ಉದ್ಯಮಿಯನ್ನು ಸಂಪರ್ಕಿಸಿದ್ದ ಆರೋಪಿಗಳು, ‘ನಿಮ್ಮ ಕೆಲಸ ಖಚಿತವಾಗಿದೆ. ಇನ್ನಷ್ಟು ಶುಲ್ಕಗಳಿದ್ದು, ಅದನ್ನು ಭರಿಸಿ’ ಎಂದಿದ್ದರು. ಅದನ್ನೂ ನಂಬಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ₹ 1.38 ಕೋಟಿ ಜಮೆ ಮಾಡಿದ್ದಾರೆ. ಆ ನಂತರ ಆರೋಪಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಸಂಬಂಧ ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಡೇಟಿಂಗ್ ಜಾಲತಾಣ

‘ಡೇಟಿಂಗ್‌ ಇಂಡಿಯಾ ಡಾಟ್ ಆನ್‌ಲೈನ್’ ಜಾಲತಾಣವು ಯುವಕ– ಯುವತಿಯರ ನಡುವೆ ಡೇಟಿಂಗ್‌ಗೆ ಅವಕಾಶ ಕಲ್ಪಿಸುತ್ತಿದೆ. ಇಂಥ ಜಾಲತಾಣದ ಹೆಸರಿನಲ್ಲೇ ಡಾಟಾ ಎಂಟ್ರಿ ಕೆಲಸದ ಆಮಿಷವೊಡ್ಡಿ ವಂಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಉದ್ಯಮಿಗೆ ‘info@datingindia.online’ ಇ–ಮೇಲ್ ಮೂಲಕವೂ ಸಂದೇಶ ಕಳುಹಿಸಲಾಗಿದೆ. ಈ ವಿಳಾಸ ಸೃಷ್ಟಿಸಿದವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT