ಜನಾರ್ದನ ರೆಡ್ಡಿ ಬೆಂಬಿಡದ ಸಿಸಿಬಿ; ಹೈದರಾಬಾದ್‌ನಲ್ಲಿ ಅಡಗಿರುವರೇ ಗಣಿ ದೊರೆ?!

7

ಜನಾರ್ದನ ರೆಡ್ಡಿ ಬೆಂಬಿಡದ ಸಿಸಿಬಿ; ಹೈದರಾಬಾದ್‌ನಲ್ಲಿ ಅಡಗಿರುವರೇ ಗಣಿ ದೊರೆ?!

Published:
Updated:

ಬೆಂಗಳೂರು: ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಡಿ ಜನಾರ್ದನ ರೆಡ್ಡಿ ಅವರ ಮೂವರು ಆಪ್ತರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಂಬಿಡೆಂಟ್ ಕಂಪನಿಯ ಮಾಲೀಕ ಫರೀದ್, ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಜನಾರ್ದನ ರೆಡ್ಡಿ ವಿಚಾರಣೆಗಾಗಿ ಸಿಸಿಬಿ ತಂಡವು ಏಕಕಾಲದಲ್ಲಿಯೇ ಬೆಂಗಳೂರಿನ ಪಾರಿಜಾತ ಅಪಾರ್ಟ್‍ಮೆಂಟ್, ಟ್ವಿನ್ ಟವರ್, ಮೊಳಕಾಲ್ಮೂರು ತೋಟದ ಮನೆ, ಬಳ್ಳಾರಿಯಲ್ಲಿಯೂ ದಾಳಿ ಮಾಡಿತ್ತು. ಆದರೆ ಜನಾರ್ದನ ರೆಡ್ಡಿ ಹೈದರಾಬಾದ್‍ಗೆ ಪರಾರಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಜನಾರ್ದನ ರೆಡ್ಡಿ ಬಂಧನಕ್ಕೆ ಸಿಸಿಬಿ ತಂಡ ಚುರುಕು ಕಾರ್ಯಾಚರಣೆ ನಡೆಸುತ್ತಿದ್ದು, ರೆಡ್ಡಿ ಇರುವ ಸ್ಥಳಗಳ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬಂಧಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಏನಿದು ಪ್ರಕರಣ?

ಮಾರ್ಕೆಟಿಂಗ್ ಹೆಸರಲ್ಲಿ ಹಣ ದ್ವಿಗುಣ ಮಾಡುವುದಾಗಿ ಲಕ್ಷಾಂತರ ಜನರಿಗೆ ಬೆಂಗಳೂರಿನ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ವಂಚನೆ ಮಾಡಿತ್ತು. ಈ ಸಂಬಂಧ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಮನಕ್ಕೆ ಬರುತ್ತಿದ್ದಂತೆ ಅವರು, ಪ್ರಕರಣವನ್ನು ಸಿಸಿಬಿ ಅಧಿಕಾರಿಗಳಿಗೆ ಒಪ್ಪಿಸಿದ್ದರು. 

ಅಂಬಿಡೆಂಟ್ ಕಂಪನಿ ಮೇಲೆ ಜನವರಿಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದರು. ಈ ಕೇಸ್ ಮುಚ್ಚಿಹಾಕಲು ಕಂಪನಿ ಮಾಲೀಕ ಫರೀದ್ ಹಲವರ ಹಿಂದೆ ಸುತ್ತಿದ್ದರು. ಈ ವೇಳೆ ಫರೀದ್‍ಗೆ ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿ ಸೇರಿ ₹25 ಕೋಟಿ ಡೀಲ್‍ಗೆ ಬೇಡಿಕೆಯಿಟ್ಟಿದ್ದರು.

ಇಡಿ ಅಧಿಕಾರಿಗೆ ₹23 ಕೋಟಿ ನೀಡಿದ್ದ ರೆಡ್ಡಿ?  

ಈ ಸಂಬಂಧ ಕಳೆದ ಮಾರ್ಚ್‌ನಲ್ಲಿ ತಾಜ್ ವೆಸ್ಟೆಂಡ್‍ನಲ್ಲಿ ಇಡಿ ಅಧಿಕಾರಿಯೊಬ್ಬರನ್ನು ಜನಾರ್ದನ ರೆಡ್ಡಿ ಭೇಟಿಯಾಗಿ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದು, ₹23 ಕೋಟಿಗೆ ಡೀಲ್ ಒಪ್ಪಿಕೊಂಡಿದ್ದರು. ಇದೇ ವೇಳೆ ರೆಡ್ಡಿ ಹಣವನ್ನು ಬ್ಲಾಕ್ ಮನಿಯಾಗಿ ನೀಡುವಂತೆ ಬೇಡಿಕೆಯಿಡ್ಡಿದ್ದರು. ಆದರೆ ಅಂಬಿಂಡೆಟ್ ಕಂಪನಿ ಮಾಲೀಕ ಫರೀದ್ ಮಾತ್ರ ಬ್ಲಾಕ್ ಇಲ್ಲ ವೈಟ್ ಹಣವಾಗೇ ನೀಡಿದ್ದರು. ಹೀಗಾಗಿ ರೆಡ್ಡಿ ಅದನ್ನು ಎನೇಬಲ್ ಕಂಪನಿಗೆ ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದರು. ಬಳಿಕ ಇಡಿ ಅಧಿಕಾರಿಗೆ ₹23 ಕೋಟಿ ಹಣ ನೀಡಿ, ರೆಡ್ಡಿ 57 ಕೆಜಿ ಚಿನ್ನ ಖರೀದಿ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 16

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !