‘ಓಲಾ, ಉಬರ್‌: ಸುರಕ್ಷತೆಗೆ ಒತ್ತು ನೀಡಿ’

7
ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಖಡಕ್‌ ಸೂಚನೆ

‘ಓಲಾ, ಉಬರ್‌: ಸುರಕ್ಷತೆಗೆ ಒತ್ತು ನೀಡಿ’

Published:
Updated:

ಬೆಂಗಳೂರು: ಓಲಾ, ಉಬರ್‌ನಂಥ ಆ್ಯ‌ಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಸಂಚರಿಸುವ ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚಿನ ಸುರಕ್ಷತೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಚಾಲಕರ ಸಂಪೂರ್ಣ ವಿವರ ಪಡೆದುಕೊಳ್ಳಬೇಕು‌ ಎಂದು ಸಂಬಂಧಿಸಿದ ಕಂಪನಿಗಳ ಮುಖ್ಯಸ್ಥರಿಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸಲಹೆ ನೀಡಿದರು.

ಜೀವನ್‌ ಬಿಮಾ ನಗರದಲ್ಲಿ ಓಲಾ ಕ್ಯಾಬ್‌ನ ಚಾಲಕನೊಬ್ಬ ಇತ್ತೀಚೆಗೆ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪರಮೇಶ್ವರ, ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪನಿಗಳ ಪ್ರತಿನಿಧಿಗಳ ಜೊತೆ ಶನಿವಾರ ಬಿಎಂಆರ್‌ಡಿಎನಲ್ಲಿ ಸಭೆ ನಡೆಸಿದರು.

ಚಾಲಕರನ್ನು ನೇಮಿಸಿಕೊಳ್ಳುವ ಮೊದಲು ಅವರ ಸಂಪೂರ್ಣ ವಿವರ ಪಡೆದುಕೊಳ್ಳಬೇಕು. ಚಾಲಕರ ನಡತೆ ಹಾಗೂ ಆತನ ಅಪರಾಧ ಹಿನ್ನಲೆಗಳ ಬಗ್ಗೆ ಪೊಲೀಸರು ಪರಿಶೀಲಿಸಿದ ಬಳಿಕ ನೇಮಿಸಿಕೊಳ್ಳಬೇಕು ಎಂದು ಕಂಪನಿಗಳ ಮಾಲೀಕರಿಗೆ ಸೂಚನೆ ನೀಡಿದರು.

ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಲು ಮಹಿಳಾ ಚಾಲಕಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳಬೇಕು. ಈಗ ಬೆರಳೆಣಿಕೆ ಸಂಖ್ಯೆಯಷ್ಟ ಮಹಿಳಾ ಚಾಲಕಿಯರಿದ್ದಾರೆ.‌ ಮಹಿಳೆಯರೇ ಚಾಲಕಿಯರಾದರೆ ರಾತ್ರಿ ಸಂದರ್ಭದಲ್ಲಿ‌ ಮಹಿಳಾ ಪ್ರಯಾಣಿಕರು ನಿರ್ಭೀತಿಯಿಂದ ಸಂಚರಿಸಬಹುದು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ಬೆಂಗಳೂರಿನಲ್ಲಿ ನಿತ್ಯ ಟ್ಯಾಕ್ಸಿಗಳು 3.5 ಲಕ್ಷ ಟ್ರಿಪ್ ಕಾರ್ಯಾಚರಣೆ ನಡೆಸುತ್ತಿವೆ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ಸುರಕ್ಷತೆ ನೀಡಬೇಕು ಎಂದು ಕ್ಯಾಬ್ ಮುಖ್ಯಸ್ಥರಿಗೆ ಪರಮೇಶ್ವರ ಸೂಚನೆ ನೀಡಿದರು.

ರಾತ್ರಿ ವೇಳೆ ಮಹಿಳೆಯರು ಪ್ರಯಾಣಿಸುವ ಕ್ಯಾಬ್‌ ಮತ್ತು ಅದನ್ನು ಚಲಾಯಿಸುವ ಚಾಲಕರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಅಥವಾ ಮಾಹಿತಿಗಳನ್ನು ಸಂಗ್ರಹಿಸುವ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಕಂಪನಿಗಳು ತಮ್ಮ ಆ್ಯಪ್‌ಗಳಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಯಿತು.

ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗಳಾದ ಆರ್‌. ಹಿತೇಂದ್ರ ಹಾಗೂ ಸೀಮಂತ್ ಕುಮಾರ್ ಸಿಂಗ್ ಸಭೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !