ಶನಿವಾರ, ಆಗಸ್ಟ್ 17, 2019
24 °C

ದೀಪದ ಮರೆಯಿಂದ ಇಣುಕಿದಳು ದೀಪಿಕಾ

Published:
Updated:
Deccan Herald

ದೀಪ್‌ವೀರ್‌ ಜೋಡಿ, ರಣಬೀರ್‌ ಸಿಂಗ್ ಹಾಗೂ ದೀಪಿಕಾ ಪಡಕೋಣೆ ಮಂಗಳವಾರ ಬೆಂಗಳೂರಿಗೆ ಬಂದಿಳಿದರು. ಏರ್‌ಪೋರ್ಟ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ಕೈ ಬೀಸುತ್ತ, ಫೋಟೊಕ್ಕೆ ಪೋಸು ನೀಡುತ್ತಲೇ ಹೊರಟರು.

ಮದುವೆಯ ದಿನದಿಂದಲೂ ತಮ್ಮ ಒಂದೇ ಬಗೆಯ ವರ್ಣ ಸಂಯೋಜನೆಯಿಂದ ಗಮನಸೆಳೆಯುತ್ತಿರುವ ಈ ಜೋಡಿ, ವಸ್ತ್ರವೈಭವದ ವರ್ಣ ಸಂಯೋಜನೆಯ ಪಯಣವನ್ನು ಇಲ್ಲಿಯೂ ಮುಂದುವರಿಸಿದೆ. ಕೆನೆಬಿಳಿ ಬಣ್ಣದ ಲೆನಿನ್‌ ಚೂಡಿದಾರ್‌ ಧರಿಸಿದ್ದ ದೀಪಿಕಾಗೆ, ಲಖನವಿ ಕಾಟನ್‌ನ ಕುರ್ತಾ ಪೈಜಾಮ ಧರಿಸಿದ್ದ ರಣಬೀರ್‌ ಜೊತೆಯಾದರು. ಹೂ ಚಿತ್ರವಿರುವ ಬಂದ್‌ಗಲಾ ಜಾಕೆಟ್‌ ಧರಿಸಿದ್ದ ರಣಬೀರ್‌, ಬೆಂಗಳೂರಿನ ಅಭಿಮಾನಿಗಳಿಗೆ ನಿರಾಶೆ ಮೂಡಿಸಲಿಲ್ಲ.

ದೀಪಿಕಾ ಮನೆಯ ಬಾಲ್ಕನಿಯಲ್ಲಿ ತನ್ನ ಮಾವ ಮತ್ತು ಹೆಂಡತಿಯ ಒಡಗೂಡಿ ಆಚೆ ಬಂದರು. ಎಲ್ಲರಿಗೂ ಕೈ ಬೀಸಿದರು. ನಾಳೆ ನಗರದಲ್ಲಿ ಆಯ್ದ ಬಂಧು ಮತ್ತು ಆಪ್ತರ ನಡುವೆ ಅವರ ಮದುವೆಯ ಆರತಕ್ಷತೆ ಸಮಾರಂಭ ನಡೆಯಲಿದೆ.

ದೀಪಿಕಾ ಸಣ್ಣ ಎಳೆಯ ಮಾಂಗಲ್ಯ, ಕಿವಿ ನೇತು ಬೀಳುವಷ್ಟು ದೊಡ್ಡದ ಓಲೆ ಧರಿಸಿ, ಗಮನಸೆಳೆದರು.

Post Comments (+)