ಪದವಿ ಕಾಲೇಜು: 5 ಸಾವಿರ ಹುದ್ದೆಗಳ ನೇಮಕಕ್ಕೆ ಕ್ರಮ

7

ಪದವಿ ಕಾಲೇಜು: 5 ಸಾವಿರ ಹುದ್ದೆಗಳ ನೇಮಕಕ್ಕೆ ಕ್ರಮ

Published:
Updated:

ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಿಗೆ ಆರು ತಿಂಗಳಲ್ಲಿ 5,000 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಶುಕ್ರವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘195 ಪ್ರಾಂಶುಪಾಲರು, 3,800 ಉಪನ್ಯಾಸಕರು ಸೇರಿದಂತೆ 5,000 ಮಂದಿ ನೇಮಕದ ಪ್ರಸ್ತಾವಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ’ ಎಂದರು.

ಮೂರು ದಿನ ಸಭೆ: ‘ಕಾಲೇಜುಗಳ ಸುಧಾರಣೆ ಬಗ್ಗೆ ಆಗಸ್ಟ್‌ 1ರಿಂದ ಮೂರು ದಿನ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಸಭೆ ನಡೆಸುತ್ತೇನೆ. 1ರಂದು ಕುಲಪತಿಗಳು ಹಾಗೂ ತಜ್ಞರ ಜತೆಗೆ, 2ರಂದು ಕುಲಪತಿಗಳು ಹಾಗೂ ಕುಲಸಚಿವರ ಜತೆಗೆ, 3ರಂದು ಮೂಲಸೌಕರ್ಯ ಒದಗಿಸುವ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ನಡೆಸುತ್ತೇನೆ’ ಎಂದರು.

‘ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ವಿಶ್ವ ಬ್ಯಾಂಕ್‌ನಿಂದಲೂ ಅನುದಾನ ಪಡೆಯುವ ಬಗ್ಗೆ ಪ್ರಯತ್ನ ಆರಂಭಿಸಿದ್ದೇವೆ’ ಎಂದರು.

ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಲು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪಡೆಯಲು ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದರು.

**

102: ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡ ಇಲ್ಲ

395: ಕಾಲೇಜುಗಳಿಗೆ ಪ್ರಾಂಶುಪಾಲರು ಇಲ್ಲ

₹160 ಕೋಟಿ: ಕಾಲೇಜುಗಳ ಮೂಲಸೌಕರ್ಯ ಒದಗಿಸಲು ನಬಾರ್ಡ್‌ ನೀಡುವ ಹಣ

₹750 ಕೋಟಿ: ಕಾಲೇಜುಗಳ ಅಭಿವೃದ್ಧಿಗೆ 3 ವರ್ಷಗಳಲ್ಲಿ ಖರ್ಚು ಮಾಡುವ ಮೊತ್ತ

10,500: ಅತಿಥಿ ಉಪನ್ಯಾಸಕರ ಮುಂದುವರಿಕೆ

**

ಮುಂದಿನ ವರ್ಷದಿಂದ ಬಿ.ಎ. ಪದವಿಯಲ್ಲಿ ಕೌಶಲ ಅಭಿವೃದ್ಧಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. 
–ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !