ಸೋಮವಾರ, ನವೆಂಬರ್ 18, 2019
25 °C

ಡಿಕೆಶಿ ಜಾಮೀನು ಅರ್ಜಿ: ಆದೇಶ ಕಾದಿರಿಸಿದ ದೆಹಲಿ ಹೈಕೋರ್ಟ್‌

Published:
Updated:

ದೆಹಲಿ: ಹಣದ ಅಕ್ರಮ ವರ್ಗಾವಣೆ ಆರೋಪದಡಿ ಬಂಧನಕ್ಕೀಡಾಗಿರುವ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಶಿವಕುಮಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್‌ ಆದೇಶ ಕಾದಿರಿಸಿದೆ. 

ಜಾಮೀನು ಅರ್ಜಿ ತಿರಸ್ಕರಿಸಿ ಇ.ಡಿ. ವಿಶೇಷ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸಿ ಡಿ.ಕೆ. ಶಿವಕುಮಾರ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಶಿವಕುಮಾರ್‌ ಪರ ವಾದ ಮಂಡಿಸಿದರು. 

ಡಿಕೆಶಿ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ವೇಳೆ ಇ.ಡಿ. ಪರ ವಕೀಲರು ಗೈರಾಗಿದ್ದರು. ಇದರಿಂದ ಪೀಠ ಮೊದಲಿಗೆ ಆದೇಶ ಕಾದಿರಿಸಿ, ಇದೇ 19ರ ಮಧ್ಯಾಹ್ನ 12ರೊಳಗೆ ಲಿಖಿತ ಪ್ರತಿವಾದ ಸಲ್ಲಿಸಲು ಇ.ಡಿ. ಪರ ವಕೀಲರಿಗೆ ಸೂಚಿಸಿತ್ತು. ಅಲ್ಲದೆ, ಇ.ಡಿ ಪರ ಕಿರಿಯ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯದ ಸಮಯ ಹಾಳುಗೆಡವಲಾಗಿದೆ ಎಂದು ಖಾರವಾಗಿ ತಿಳಿಸಿತು.

ನಂತರ ಇಡಿ ವಕೀಲ ಕೆ.ಎಂ. ನಟರಾಜ್ ನ್ಯಾಯಾಲಯಕ್ಕೆ ಆಗಮಿಸಿ, ವಾದ ಮಂಡನೆಗೆ ಅವಕಾಶ ಕೋರಿದರು. ನಂತರ ವಿಚಾರಣೆ ಪುನಾರಂಭಗೊಂಡಿತು. 

ವಾದ ವಿವಾದಗಳನ್ನು ಆಲಿಸಿರುವ ನ್ಯಾಯಪೀಠ ಆದೇಶ ಕಾದಿರಿಸಿದೆ. 

ಪ್ರತಿಕ್ರಿಯಿಸಿ (+)