ರಾಕ್ಷಸ ಸ್ವರೂಪದ ಮಹಿಷ ಪ್ರತಿಮೆ ಕೆಡವಿ: ಪ್ರೊ.ಕೆ.ಎಸ್.ಭಗವಾನ್

7

ರಾಕ್ಷಸ ಸ್ವರೂಪದ ಮಹಿಷ ಪ್ರತಿಮೆ ಕೆಡವಿ: ಪ್ರೊ.ಕೆ.ಎಸ್.ಭಗವಾನ್

Published:
Updated:
Deccan Herald

ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ರಾಕ್ಷಸ ರೂಪದ ಮಹಿಷನ ಪ್ರತಿಮೆಯನ್ನು ಕೆಡವಿ, ಸೌಮ್ಯ ಸ್ವರೂಪದ ಪ್ರತಿಮೆ ಸ್ಥಾಪಿಸಬೇಕು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಇಲ್ಲಿ ಬುಧವಾರ ಸಲಹೆ ಮಾಡಿದರು.

ಮೈಸೂರಿನ ಅಂದಿನ ಮಹಾರಾಜರು ಪುರೋಹಿತಶಾಹಿಗಳ ಮಾತುಕೇಳಿ ರಕ್ಕಸ ಸ್ವರೂಪದ ಮಹಿಷನ ಪ್ರತಿಮೆ ನಿರ್ಮಿಸಿದ್ದರು. ಅದು ಈಗಲೂ ಹಾಗೆಯೇ ಇರಬೇಕು ಎಂದೇನಿದೆ. ವಾಸ್ತವದಲ್ಲಿ ಮಹಿಷ ರಾಕ್ಷಸನೇ ಅಲ್ಲ. ಆತ ಸ್ಥಳೀಯ ನಾಯಕ. ಪಿತೂರಿ ನಡೆಸಿ ಮಾನವನನ್ನು ರಕ್ಕಸನ್ನಾಗಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಬೌದ್ಧ ಭಿಕ್ಕುವಿನ ಸ್ವರೂಪದ ಮಹಿಷನ ಪ್ರತಿಮೆ ನಿರ್ಮಾಣವಾಗಬೇಕು. ಆಗಲೇ ಅವನಿಗೆ ಗೌರವ ಸಲ್ಲಿಸಿದಂತಾಗುವುದು ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !