ಮೋದಿಯನ್ನು ಜೀವಂತವಾಗಿ ಸುಡಬೇಕಾದ ದಿನ ಇವತ್ತಾಗಿದೆ: ಟಿ.ಬಿ.ಜಯಚಂದ್ರ

7

ಮೋದಿಯನ್ನು ಜೀವಂತವಾಗಿ ಸುಡಬೇಕಾದ ದಿನ ಇವತ್ತಾಗಿದೆ: ಟಿ.ಬಿ.ಜಯಚಂದ್ರ

Published:
Updated:

ಬೆಂಗಳೂರು: ನೋಟ್‌ ಬ್ಯಾನ್‌ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘50 ದಿನ ನನಗೆ ಕಾಲಾವಕಾಶ ಕೊಡಿ. ನಾನು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ನನ್ನನ್ನು ಜೀವಂತವಾಗಿ ಸುಡಿ’ ಎಂದು ಹೇಳಿದ್ದರು. ಜೀವಂತವಾಗಿ ಸುಡಬೇಕಾದ ದಿನ ಇವತ್ತಾಗಿದೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಟೀಕಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟ್‌ ಬ್ಯಾನ್‌ಗೆ ನ.8ಕ್ಕೆ ಎರಡು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಈ ಪ್ರತಿಕ್ರಿಯೆ ನೀಡಿದರು.

ಅವರಿಗೆ(ಮೋದಿ) ಅವರ ಮಾತು ಜ್ಞಾಪಕ ಇದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಒತ್ತಾಯಿಸಿದರು.

ಕತ್ತೆ ಸಾಧು ಪ್ರಾಣಿ. ಅವರ(ಮೋದಿ) ಸರ್ಕಾರದ ಆಮೆ ನಡಿಗೆಯನ್ನು ಆಮೆಗೂ ಹೋಲಿಸಬಹುದು, ಬೇರೊಂದಕ್ಕೂ ಹೋಲಿಸಬಹುದು ಎಂದು ಅವರು ವ್ಯಂಗ್ಯವಾಡಿದರು ಎಂದು ಎಎನ್‌ಐ ಟ್ವಿಟ್‌ ಮಾಡಿದೆ.
 

ಬರಹ ಇಷ್ಟವಾಯಿತೆ?

 • 26

  Happy
 • 3

  Amused
 • 1

  Sad
 • 2

  Frustrated
 • 18

  Angry

Comments:

0 comments

Write the first review for this !