ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಯನ್ನು ಅವಹೇಳನ ಮಾಡಿದ ವ್ಯಕ್ತಿ ಬಂಧನ

7

ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಯನ್ನು ಅವಹೇಳನ ಮಾಡಿದ ವ್ಯಕ್ತಿ ಬಂಧನ

Published:
Updated:

 ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಕರ್ನಾಟಕ ಪೊಲೀಸರು (ಅಪರಾಧ ಪತ್ತೆ ದಳ) ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ  24ರ ಹರೆಯದ ಪ್ರಶಾಂತ್ ಪೂಜಾರಿ. ಈತ ಮಂಗಳೂರು ನಿವಾಸಿ. ಈತನ ವಿರುದ್ಧ ಐಪಿಸಿ ಸೆಕ್ಷನ್‌ 153, 504 ಹಾಗೂ ಐಟಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಕುಡ್ಲ ಟ್ರೋಲ್ಸ್ ಎಂಬ ಫೇಸ್‌‍ಬುಕ್ ಪೇಜ್‍ನಲ್ಲಿ ಕುಮಾರಸ್ವಾಮಿಯನ್ನು ಅವಹೇಳನ ಮಾಡಿ ಪೋಸ್ಟ್ ಹಾಕಲಾಗಿತ್ತು. ಪ್ರಶಾಂತ್ ಪೂಜಾರಿ ಕುಡ್ಲ ಟ್ರೋಲ್ಸ್ ಪೇಜ್‍ನ ಅಡ್ಮಿನ್ ಆಗಿದ್ದಾರೆ. ಕುಮಾರಸ್ವಾಮಿಯವರ ಫೋಟೊವೊಂದನ್ನು ತೋರಿಸಿ ಮಹಿಳೆಯೊಬ್ಬರು ಇದು ಯಾರು? ಎಂದು ಕೇಳುವ ಚಿತ್ರ, ಅದರ ಅಡಿಯಲ್ಲಿ ಇಂಗ್ಲಿಷ್‍ನಲ್ಲಿ ಬೈಗುಳವಿರುವ ಪೋಸ್ಟ್ ಅದಾಗಿತ್ತು.

ಮುಖ್ಯಮಂತ್ರಿಯನ್ನು ಅವಹೇಳನ ಮಾಡಿದ ಪೋಸ್ಟ್ ಇದಾಗಿದ್ದು, ಪ್ರಶಾಂತ್ ಪೂಜಾರಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದೆವು. ಈ ಪೋಸ್ಟ್ ನ ಕೆಳಗಡೆ ಕೆಟ್ಟದಾಗಿ ಬೈದ ಕಾಮೆಂಟ್‍ಗಳೂ, ಬೆದರಿಕೆಗಳೂ ಇದ್ದವು. ಕುಡ್ಲ ಟ್ರೋಲ್ ಪೇಜ್‍ನಲ್ಲಿ ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡಿದ ಹಲವಾರು ಪೋಸ್ಟ್ ಗಳಿವೆ ಎಂದು ಸಿಸಿಬಿ ಅಧಿಕಾರಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 20

  Happy
 • 4

  Amused
 • 2

  Sad
 • 4

  Frustrated
 • 6

  Angry

Comments:

0 comments

Write the first review for this !