ತಳಮಟ್ಟದ ನೌಕರರ ಅನುಕಂಪ ಭತ್ಯೆ ಹೆಚ್ಚಳ

7

ತಳಮಟ್ಟದ ನೌಕರರ ಅನುಕಂಪ ಭತ್ಯೆ ಹೆಚ್ಚಳ

Published:
Updated:

ಬೆಂಗಳೂರು: ಕೆಳದರ್ಜೆ ನೌಕರರಾದ ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರರಿಗೆ ಹಾಲಿ ಕೊಡುತ್ತಿರುವ ತಿಂಗಳ ₹800 ಅನುಕಂಪ ಭತ್ಯೆಯನ್ನು ₹1,600ಕ್ಕೆ ಹೆಚ್ಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಒಟ್ಟು 2,869 ಕೆಳದರ್ಜೆ ನೌಕರರಿದ್ದಾರೆ. ಈ ಪೈಕಿ ಬೆಂಗಳೂರು ಕಂದಾಯ ವಿಭಾಗದಲ್ಲಿ 1,925, ಮೈಸೂರು ವಿಭಾಗದಲ್ಲಿ 56, ಬೆಳಗಾವಿ ವಿಭಾಗದಲ್ಲಿ 281 ಮತ್ತು ಕಲಬುರ್ಗಿ ವಿಭಾಗದಲ್ಲಿ 607 ಮಂದಿ ಇದ್ದಾರೆ. ಇವರೆಲ್ಲರಿಗೂ ಈ ಹೆಚ್ಚಳದ ಲಾಭ ಸಿಗಲಿದೆ’ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !