ಡ್ರೋನ್‌ ಬಳಸಿ ಗಾಂಜಾ ಪತ್ತೆ, ವಶ

7

ಡ್ರೋನ್‌ ಬಳಸಿ ಗಾಂಜಾ ಪತ್ತೆ, ವಶ

Published:
Updated:
Deccan Herald

ಸೊರಬ: ತಾಲ್ಲೂಕಿನಲ್ಲಿ ಜೋಳ, ಶುಂಠಿ ಹಾಗೂ ಅಡಿಕೆ ಬೆಳೆಗಳ ನಡುವೆ ಅಕ್ರಮವಾಗಿ ಬೆಳೆಯುತ್ತಿದ್ದ ಗಾಂಜಾವನ್ನು ಅಬಕಾರಿ ಇಲಾಖೆ ಡ್ರೋನ್‌ ಕ್ಯಾಮೆರಾದಿಂದ ಗುರುವಾರ ಪತ್ತೆಹಚ್ಚಿ, ವಶಪಡಿಸಿಕೊಂಡಿದೆ.

ತಾಲ್ಲೂಕಿನ ಮಾಳೇಕೊಪ್ಪ, ಕೊಡಕಣಿ ಹಾಗೂ ಸಾರೇಕೊಪ್ಪ ಗ್ರಾಮಗಳಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ ವೈ.ಆರ್. ಲೋಕೇಶ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತು. ಅಡಿಕೆ, ಶುಂಠಿ ಬೆಳೆಯ ನಡುವೆ ಬೆಳೆದಿದ್ದ ಸುಮಾರು 5 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು.

‘ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಮುಸುಕಿನ ಜೋಳ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆಯಲಾಗುತ್ತಿದೆ. ಗಾಂಜಾ ಬೆಳೆಯದಂತೆ ರೈತರಲ್ಲಿ ಜಾಗೃತಿ ಮೂಡಿಸಲು ಇಲಾಖೆ ಪಣ ತೊಟ್ಟಿದ್ದು, ಮೊದಲ ಹಂತವಾಗಿ ಈ ಗ್ರಾಮಗಳಲ್ಲಿ ದಾಳಿ ನಡೆಸಲಾಗಿದೆ’ ಎಂದು ವೈ.ಆರ್.ಮೋಹನ್ ಸುದ್ದಿಗಾರರಿಗೆ ತಿಳಿಸಿದರು.

‘ಸಾರೇಕೊಪ್ಪ ಗ್ರಾಮದ ನಾಗಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಅಡಿಕೆ ಹಾಗೂ ಶುಂಠಿ ಬೆಳೆ ನಡುವೆ ಬೆಳೆದಿದ್ದ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡು ಮಾಲೀಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ’ ಎಂದು ಅಬಕಾರಿ ಪಿಎಸ್‍ಐ ದಯಾನಂದ ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !