ಮಂಗಳವಾರ, ಸೆಪ್ಟೆಂಬರ್ 17, 2019
22 °C

ಇಂದು ದೇವರಾಜ ಅರಸರ ಜನ್ಮ ದಿನ: ಗಣ್ಯರ ಸ್ಮರಣೆ

Published:
Updated:

ಬೆಂಗಳೂರು: ಇಂದು (ಆ.20) ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರ ಜನ್ಮದಿನದ. ಇದೇ ಹಿನ್ನೆಲೆಯಲ್ಲಿ ಹಲವು ರಾಜಕೀಯ ನಾಯಕರು ಅರಸರಿಗೆ ನಮನ ಸಲ್ಲಿಸಿದ್ದಾರೆ.

‘ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಹುಟ್ಟುಹಬ್ಬದ ನಮನಗಳು. ಅವರೆದೆಯ ಹಾಡಾದ ಸಾಮಾಜಿಕ ನ್ಯಾಯದ ಹೋರಾಟ ಇನ್ನೂ ಗುರಿಮುಟ್ಟಿಲ್ಲ. ಅವರು ಪ್ರಾರಂಭಿಸಿದ ಪರಿವರ್ತನೆಯ ಪಯಣ ನಿಲ್ಲಬಾರದು. ಮುಂದೆ ಸಾಗುತ್ತಲೇ ಇರಬೇಕು. ಇದೇ ನಾವೆಲ್ಲರೂ ಕೂಡಿ ದೇವರಾಜ ಅರಸು ಅವರಿಗೆ ಸಲ್ಲಿಸುವ ಗೌರವ,’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯ ತಂದು ಕೊಟ್ಟ, ಭೂ ಸುಧಾರಣೆ ಜಾರಿಗೆ ತಂದ, ದುರ್ಬಲರ ದನಿಯಾಗಿದ್ದ ಅರಸು ಅವರ ಜನ್ಮದಿನವಿಂದು. ಶಾಶ್ವತ ಕಾರ್ಯಗಳು, ಆಲೋಚನೆಗಳ ಮೂಲಕ ಸದಾ ನಮ್ಮೊಂದಿಗೆ ಇರುವ ಅರಸರ ಆದರ್ಶ ಇಂದು ಎಲ್ಲ ರಾಜಕಾರಣಿಗಳಿಗೂ ಮಾದರಿಯಾಗಲಿ,’ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ಆಶಿಸಿದ್ದಾರೆ.

Post Comments (+)