‘ದೇವೇಗೌಡ ‘ಭಸ್ಮಾಸುರ’; ಕಾಂಗ್ರೆಸ್‌ಗೆ ಗತಿಯಿಲ್ಲ’

7

‘ದೇವೇಗೌಡ ‘ಭಸ್ಮಾಸುರ’; ಕಾಂಗ್ರೆಸ್‌ಗೆ ಗತಿಯಿಲ್ಲ’

Published:
Updated:

ವಿಜಯಪುರ: ‘ದೇವೇಗೌಡ ಭಸ್ಮಾಸುರ ಇದ್ದಂತೆ. ಅವರ ದೋಸ್ತಿ ಮಾಡಿದರೆ ಕತೆ ಮುಗಿದಂತೆ. ಮೈತ್ರಿಯಿಂದ ಕಾಂಗ್ರೆಸ್‌ ಆದಷ್ಟು ಶೀಘ್ರದಲ್ಲೇ ಹೊರ ಬೀಳದಿದ್ದರೆ, ಮುಂದಿನ ದಿನಗಳಲ್ಲಿ ಅದಕ್ಕೆ ಉಳಿಗಾಲವಿರದು’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬುಧವಾರ ಇಲ್ಲಿ ಎಚ್ಚರಿಸಿದರು.

‘ದೇಶದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್‌ ಜತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ವಿವಿಧ ರಾಜ್ಯಗಳ ಪ್ರಮುಖ ಪ್ರಾದೇಶಿಕ ಪಕ್ಷಗಳು ಹಿಂದೇಟು ಹಾಕುತ್ತಿವೆ. ಇದೀಗ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಒಬ್ಬರೇ ಆಸರೆಯಾಗಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ನ ಈ ಅನಿವಾರ್ಯತೆ ಅರಿತಿರುವ ದೇವೇಗೌಡರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಆಗಾಗ್ಗೆ ಪ್ರಧಾನಿ ಮೋದಿ ಭೇಟಿ ಮಾಡಿ, ಕಾಂಗ್ರೆಸ್ಸಿಗರಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದಾರೆ. ಗೌಡರಿಂದ ಬಿಜೆಪಿಗೆ ಯಾವುದೇ ಲಾಭವಾಗಲ್ಲ. ಇದಕ್ಕೆ ನಮ್ಮವರು ಆಸ್ಪದ ಮಾಡಿಕೊಡಬಾರದು’ ಎಂದು ಅವರು, ಬಿಜೆಪಿ ವರಿಷ್ಠರನ್ನು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !