ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಯಂತ್ರಗಳು ಕೆಟ್ಟಿವೆ ಎಂದು ಪ್ರತಿಪಕ್ಷದಿಂದ ದೂರು: ಆರೋಪ ನಿರಾಕರಿಸಿದ ಚುನಾವಣಾ ಆಯೋಗ

Last Updated 28 ಮೇ 2018, 12:22 IST
ಅಕ್ಷರ ಗಾತ್ರ

ನವದೆಹಲಿ: ಭಂಡಾರಾ–ಗೋಂದಿಯಾ(ಮಹಾರಾಷ್ಟ್ರ) ಮತ್ತು ಕೈರಾನಾ(ಉತ್ತರ ಪ್ರದೇಶ) ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯ ಬಹುತೇಕ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರಗಳು(ಇವಿಎಂ) ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಈ ಆರೋಪವನ್ನು ಆಯೋಗ ನಿರಾಕರಿಸಿದೆ.

ಅತಿಯಾದ ದಗೆಯಿಂದ ಕೆಲವು ಮತಗಟ್ಟೆಗಳ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಅದನ್ನು ತಕ್ಷಣ ಸರಿಪಡಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಆಯೋಗ ಸ್ಪಷ್ಟನೆ ನೀಡಿದೆ.

‘ಬಹುತೇಕ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಡ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ’ ಎಂದು ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳದಿಂದ ಸ್ಪರ್ಧಿಸಿರುವ ಮಾಜಿ ಸಂಸದೆ ತಬಸ್ಸುಮ್‌ ಹಸನ್‌ ಆಯೋಗಕ್ಕೆ ಇಂದು ಮಧ್ಯಾಹ್ನ ದೂರು ನೀಡಿದರು.

‘ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ನಮ್ಮ ಅಳಲನ್ನು ಕೇಳುವವರಿಲ್ಲ’ ಎಂದು ತಬಸ್ಸುಮ್‌  ಇವಿಎಂಗಳು ಕಾರ್ಯನಿರ್ವಹಿಸದ ಮತಗಟ್ಟೆಗಳ ಪಟ್ಟಿಯನ್ನು ಪ್ರದರ್ಶಿಸಿದರು.

‘ನೂರ್‌ಪುರ್‌ ಒಂದರಲ್ಲೇ 140 ಇವಿಎಂಗಳನ್ನು ತಿರುಚಲಾಗಿದೆ. ಕೈರಾನಾದಲ್ಲಿಯೂ ಇಂತಹದ್ದೆ ಪ್ರಕರಣಗಳು ನಡೆದಿವೆ ಎಂಬ ಮಾಹಿತಿ ಬರುತ್ತಿದೆ. ಗೋರಖ್‌ಪುರ ಮತ್ತು ಫುಲ್ಪುರಗಳ ಲೋಕಸಭಾ ಚುನಾವಣೆಗಳಲ್ಲಿ ಕಂಡ ಸೋಲನ್ನು ತಪ್ಪಿಸಲು ಬಿಜೆಪಿಯೇ ಈ ಕೆಲಸ ಮಾಡುತ್ತಿದೆ’ ಎಂದು ಸಮಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಆರೋಪ ಮಾಡಿದ್ದಾರೆ.

‘ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇಂದು ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಬಹುತೇಕ ಕಡೆ ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದು ವಾಸ್ತವಕ್ಕೆ ದೂರವಾದ ಉತ್ಪ್ರೇಕ್ಷೆಯಾಗಿದೆ’ ಎಂದು ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT