ಒಬಿಸಿ ಕಮಿಷನ್‌ ಸ್ಥಾಪನೆಗೆ ದೇವೇಗೌಡ ಒತ್ತಾಯ

7
ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ

ಒಬಿಸಿ ಕಮಿಷನ್‌ ಸ್ಥಾಪನೆಗೆ ದೇವೇಗೌಡ ಒತ್ತಾಯ

Published:
Updated:
Deccan Herald

ಬೆಂಗಳೂರು: ಗುಜರಾತ್‌ನ ಪಾಟೀದಾರ್‌ ಸಮುದಾಯದ ಬೇಡಿಕೆ ಪರಿಗಣಿಸಿ, ತಕ್ಷಣವೇ ಒಬಿಸಿ ಕಮಿಷನ್‌ ನೇಮಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಪ್ರಧಾನಿ ನರೇಂದ್ರಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮೋದಿಯವರಿಗೆ ಪತ್ರ ಬರೆದಿರುವ ಅವರು, ಒಬಿಸಿ ಕಮಿಷನ್‌ ನೀಡುವ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಾರ್ದಿಕ್‌ ಪಟೇಲ್‌ ಮೂರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದೀಗ ಅವರು ಉಪವಾಸ ಸತ್ಯಾಗ್ರಹವನ್ನೂ ಆರಂಭಿಸಿದ್ದಾರೆ. ಚಿಕ್ಕ ವಯಸ್ಸಿನ ಈ ಯುವಕ ತನ್ನ ಸಮುದಾಯದ ಹಿತಕ್ಕಾಗಿ ಹಗಲು– ರಾತ್ರಿ ಎನ್ನದೇ ಹೋರಾಟ ಮಾಡುತ್ತಿದ್ದಾರೆ. ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !