ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯದ ಮೇಲೆ ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಪ್ರಭಾವ’

Last Updated 5 ಫೆಬ್ರುವರಿ 2018, 10:35 IST
ಅಕ್ಷರ ಗಾತ್ರ

ಹಾವೇರಿ: ‘ಕನ್ನಡ ಸಾಹಿತ್ಯವು ಆಯಾ ಕಾಲಘಟ್ಟದಲ್ಲಿ ಅಭಿವ್ಯಕ್ತಿಸಲ್ಪಟ್ಟ ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ಮೌಲ್ಯಗಳಿಂದ ಪ್ರಭಾವಿಸಲ್ಪಟ್ಟಿದೆ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಸಿ.ಮರಡಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ನಗರದ ಹುಕ್ಕೇರಿಮಠದ ರಾಚೋಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ದಿ.ಗುರುಶಾಂತಪ್ಪ ಜಾಬೀನ್ ದತ್ತಿನಿಧಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ‘ಇಂದಿನ ಯುವಪೀಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರೂ, ಅವರಲ್ಲಿ ಗಂಭೀರ ಅಧ್ಯಯನಶೀಲತೆಯ ಕೊರತೆ ಇದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಮಾತನಾಡಿ, ‘ನಮ್ಮ ಜಿಲ್ಲೆ ಸರ್ವಜ್ಞ, ಕನಕದಾಸ, ಶರೀಫ, ಗಳಗನಾಥ, ವಿ.ಕೃ.ಗೋಕಾಕ, ಪಾಟೀಲ ಪುಟ್ಟಪ್ಪ ಅವರಂತಹ ಮಹನೀಯರನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದು ಹೆಮ್ಮೆಯ ವಿಷಯ’ ಎಂದು ಹೇಳಿದರು.

ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಸ್.ಎನ್ ದೊಡ್ಡಗೌಡರ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಕಾರ್ಯದರ್ಶಿ ಎಸ್.ಸಿ.ಮರಳಿಹಳ್ಳಿ, ಲಲಿತಮ್ಮ ಜಾಬೀನ್, ಸಂಗಪ್ಪ ಜಾಬೀನ್, ಚನ್ನವೀರಪ್ಪ ಅಕ್ಕಿ, ಪ್ರಾಚಾರ್ಯ ಎಸ್.ವಿ ಹಿರೇಮಠ, ಎಸ್.ಸಿ.ಮರಳಿಹಳ್ಳಿ, ಕೆ.ಬಿ.ಬಿಕ್ಷಾವರ್ತಿಮಠ, ವಿ.ಪಿ.ದ್ಯಾಮಣ್ಣನವರ, ಜಿ.ಎನ್.ಹೂಗಾರ, ಬಿ.ಎಂ.ಮಠ, ಎಫ್.ಬಿ.ಮರಡೂರ, ನಾಗರಾಜ ನಡುವಿನಮಠ, ಎಸ್.ಆರ್.ಹಿರೇಮಠ, ಅಕ್ಕಮ್ಮ ಮುದ್ದಿ, ರೇಣುಕಾ ಗುಡಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT