ಗುರುವಾರ , ಮೇ 19, 2022
20 °C
ಸಚಿವ ಡಿಕೆಶಿ– ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ನಡುವೆ ಮಾತು

ಡಿಕೆಶಿ–ಅನೂಪ್‌ ನಡುವೆ ಮಾತುಕತೆ; ಕಾರ್ಯಕರ್ತರಿಗೆ ಧಮ್ಕಿ ಆಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕಾಂಗ್ರೆಸ್‌ ಕಾರ್ಯಕರ್ತರಿಗೆ ಧಮ್ಕಿ ಹಾಕಲಾಗುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಮಹಾನಗರ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅನೂಪ್‌ ಬಿಜವಾಡ ನಡುವೆ ನಡೆದಿರುವ ಮಾತುಕತೆಯ ಆಡಿಯೊ ವ್ಯಾಟ್ಸ್ಆ್ಯಪ್‌ನಲ್ಲಿ ವೈರಲ್‌ ಆಗಿದೆ. ಸಂಭಾಷಣೆ ಹೀಗಿದೆ.

ಡಿಕೆಶಿ: ಏನ ನಮ್ಮ ಹುಡುಗರಿಗೆ ಧಮ್ಕಿ ಹಾಕತಿದ್ದಿಯಂತೆ. ಏನ್‌ ಸಮಾಚಾರ?

ಅನೂಪ್‌ ಬಿಜವಾಡ: ನಾವ್ಯಾಕೆ ಧಮ್ಕಿ ಹಾಕಬೇಕು ಅವರಿಗೆ

ಡಿಕೆಶಿ: ಅಲ್ಲಿ ಹೋಗಬೇಡ ನೀನು. ಅದು ಮಾಡಬ್ಯಾಡ, ಇದು ಮಾಡಬ್ಯಾಡ ಅಂತ.

ಅನೂಪ್‌ ಬಿಜವಾಡ: ಯಾರು, ಯಾರು, ನಾವ್ಯಾಕ ಧಮ್ಕಿ ಹಾಕಬೇಕು ಅಲ್ಲಿ, ಅವರಿಗೆ.

ಡಿಕೆಶಿ: ಇಲ್ಲೇ ನಮ್ಮ ಹುಡುಗ ಇದ್ದಾನೆ.

ಬಿಜವಾಡ: ಯಾರ್ರಿ ನಿಮ್ಮ ಹುಡುಗ?

ಡಿಕೆಶಿ: ನಿನ್ನ ಎಲೆಕ್ಷನ್‌, ನೀ ನೀನು ಏನಬೇಕಾದರೂ ನಿನ್ನ ಪಾರ್ಟಿಗೆ ಮಾಡ್ಕೊ

ಬಿಜವಾಡ: ನಮ್ಮ ಎಲೆಕ್ಷನ್‌ ನಾವು ಮಾಡುತ್ತಿದ್ದೇವೆ. ಅವರ ಎಲೆಕ್ಷನ್‌ ಅವರು ಮಾಡುತ್ತಿದ್ದಾರೆ. ನಾವ್ಯಾಕೆ ಅವರಿಗೆ ಯಾಕೆ ಧಮ್ಕಿ ಹಾಕಬೇಕು ಅಲ್ಲಿ.

ಡಿಕೆಶಿ: ಧಮ್ಕಿ ಗಿಕಿ ಹಾಕೋದು. ಬಿಸಿನೆಸ್‌.. ಮತ್ತೊಂದು‌

ಬಿಜವಾಡ: ನಾವು ಯಾರಿಗೆ ಧಮ್ಕಿ ಹಾಕಲ್ಲ, ನೀವು ಯಾರಿಗೂ ಹಾಕಬೇಡಿ. ನಾವು ಧಮ್ಕಿ ಹಾಕೊರಲ್ಲಲ್ಲ. ಅದನ್ನು ನೀವು ತಿಳಕೊಳ್ಳಿರಿ ಫಸ್ಟ್

ಡಿಕೆಶಿ: ಬಿಟ್ಟು ಬಿಟ್ಟು ಸುಮ್ಮನೆ ನಿಮ್ಮ ಕೆಲಸ ಎಷ್ಟು ಮಾಡು. ನಿಮ್ಮ ಎಲೆಕ್ಷನ್‌ ಮಾಡು ಪರವಾಗಿಲ್ಲ.

ಬಿಜವಾಡ: ನಮ್ಮ ಕೆಲಸ ನಾವು ಮಾಡುತ್ತೇವೆ, ನೀವು ನಿಮ್ಮ, ನಿಮ್ಮ ಕೆಲಸ ಮಾಡಿ. ಅಷ್ಟೇ ಸಾಕು ಮತ್ತೇನಲ್ಲ.. ನಾವೇನು..ನಿಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕಲ್ಲ;ಮಾಡಲ್ಲ. ನಿಮ್ಮ ಕಾರ್ಯಕರ್ತರು ಇರುವುದಕ್ಕೆ ಮೊದಲು ಫ್ರೆಂಡ್ಸ್ ಇದ್ದಾರೆ ಅಲ್ಲಿ. ಏನ್ರಿ ನಾವೆಲ್ಲ ಕಾಲೇಜು ಫ್ರೆಂಡ್ಸ್ ಇದ್ದೇವೆ. ಮಾತನಾಡತ್ತೇವೆ. ಕಾಂಗ್ರೆಸ್‌ ಕಾರ್ಯಕರ್ತರಗೆ ಯಾಕೆ ಧಮ್ಕಿ ಹಾಕಬೇಕು ನಾವು?

ಡಿಕೆಶಿ: ಹಾಕುತಾ ಇರೋ ಪಟ್ಟಿ ಹೇಳಿತಾ ಇರೋದಕ್ಕೆ ಹೇಳ್ತಿರೋದು ನಿನಗೊಂದು ಮಾತು ಹೇಳ್ತಿರೋದು

ಬಿಜವಾಡ: ನೋಡಿ ಸರ್‌. ನಾನು ನಿಮಗೇನು ಹೇಳೋದು. ನಿಮಗೆ ಮಿಸ್‌ ಗೈಡ್ ಇದು ಆಗ್ತಾ ಇರೋದು. ನೋಡಿ ಸರ್‌ ನಾನು ನಿಮಗೆ ಹೇಳೋದು. ಧಮ್ಕಿ ಹಾಕಿದರೆ,  ಓಟ್‌ ಬರುತ್ತಾ ಬರಲ್ಲ, ರಿಕ್ವೆಸ್ಟ್‌ ಮಾಡಿದರೆ ವೋಟ್‌ ಬರತಾವೆ.

ಡಿಕೆಶಿ: ಸರಿ. ಮಾತಾಡ್ತಿನಿ ಬಿಡು

ಬಿಜವಾಡ: ಓಕೆ.. ಓಕೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು