ವಾಯುಪಡೆಗೆ ಮೂರು ಹೆಲಿಕಾಪ್ಟರ್ ಹಸ್ತಾಂತರ

ಭಾನುವಾರ, ಮೇ 26, 2019
30 °C

ವಾಯುಪಡೆಗೆ ಮೂರು ಹೆಲಿಕಾಪ್ಟರ್ ಹಸ್ತಾಂತರ

Published:
Updated:

ಬೆಂಗಳೂರು: ಮೂರು ‘ಎಎಲ್‍ಎಚ್-ಎಂಕೆ 3 (ಧ್ರುವ್)’ ಹೆಲಿಕಾಪ್ಟರ್‌ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್‌ (ಎಚ್‌ಎಎಲ್) ಕಂಪನಿ ಶುಕ್ರವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತು.

ಏರೋ ಇಂಡಿಯಾ ಪ್ರದರ್ಶನದ ಸಂದರ್ಭ ಲೆಫ್ಟಿನೆಂಟ್ ಜನರಲ್ ಕನ್ವಲ್ ಕುಮಾರ್ ಅವರಿಗೆ ಎಚ್‍ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಅವರು ಧ್ರುವ್ ಹೆಲಿಕಾಪ್ಟರ್‌ಗಳ ಮಾದರಿ ಹಸ್ತಾಂತರಿಸಿದರು.

ವಾಯುಪಡೆಗೆ 40 ‘ಎಎಲ್‍ಎಚ್-ಎಂಕೆ 3 (ಧ್ರುವ್)’ ಹೆಲಿಕಾಪ್ಟರ್‌ಗಳನ್ನು ನೀಡುವ ಬಗ್ಗೆ 2017ರಲ್ಲಿ ಎಚ್‌ಎಎಲ್ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ, 22 ‘ಎಎಲ್‍ಎಚ್ ಎಂಕೆ-3’ ಹಾಗೂ 18 ‘ಎಂಕೆ 4 ರುದ್ರ’ ಹೆಲಿಕಾಪ್ಟರ್‌ಗಳನ್ನು ಈಗಾಗಲೇ ಪೂರೈಕೆ ಮಾಡಬೇಕಾಗಿತ್ತು.

‘ಎಂಕೆ-4 ರುದ್ರ’ ಹೆಲಿಕಾಪ್ಟರ್‌ಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ. ಉಳಿದ 19 ಹೆಲಿಕಾಪ್ಟರ್‌ಗಳನ್ನು ಜೂನ್ ಅಥವಾ ಜುಲೈ ವೇಳೆಗೆ ಹಸ್ತಾಂತರಿಸುವ ಗುರಿ ಹೊಂದಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರಿನಲ್ಲಿ ಶೀಘ್ರ ಹೆಲಿಕಾಪ್ಟರ್‌ ಘಟಕ: ತುಮಕೂರಿನ ಹೆಲಿಕಾಪ್ಟರ್ ನಿರ್ಮಾಣ ಘಟಕದ ಎರಡನೇ ಹಂತದ ಅಭಿವೃದ್ಧಿಗೆ ಸಂಬಂಧಿಸಿದ ಕರಾರು ಒಡಂಬಡಿಕೆಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಮತ್ತು ಎಚ್‌ಎಎಲ್‌ ಸಹಿ ಹಾಕಿವೆ.

ಹೆಲಿಕಾಪ್ಟರ್ ಘಟಕದ ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಎರಡನೇ ಹಂತದಲ್ಲಿ ಮೂಲಸೌಕರ್ಯ ಒದಗಿಸುವುದು ಹಾಗೂ ಹೆಲಿಕಾಪ್ಟರ್ ನಿರ್ಮಾರ್ಣಕ್ಕೆ ಅಗತ್ಯವಾದ ಉಪಕರಣ ಅಳವಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2020ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಎಚ್‌ಎಎಲ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !