ವಜ್ರ ಖರೀದಿಗೂ ಮುನ್ನ ಇರಲಿ ಎಚ್ಚರ

ಮಂಗಳವಾರ, ಏಪ್ರಿಲ್ 23, 2019
27 °C

ವಜ್ರ ಖರೀದಿಗೂ ಮುನ್ನ ಇರಲಿ ಎಚ್ಚರ

Published:
Updated:
Prajavani

ವಜ್ರದ ಹರಳುಗಳ ಖರೀದಿಗೂ ಮುನ್ನ ಅವುಗಳ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಲು ನಗರದ ಆಭರಣ ಸಂಸ್ಥೆಯು ಫಾರ್‌ಎವೆರ್‌ ಮಾರ್ಕ್‌ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಯಾಗಾರ ಆಯೋಜಿಸಿತ್ತು. 250ಕ್ಕೂ ಹೆಚ್ಚು ಗ್ರಾಹಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ವಜ್ರಾಭರಣ ಉದ್ಯಮದಲ್ಲಿ ಅನುಭವ ಹೊಂದಿದ ಅಗ್ರಗಣ್ಯ ಉದ್ಯಮಿಗಳು ಗ್ರಾಹಕರ ಎದುರು ತಮ್ಮ ಅನುಭವ ಬಿಚ್ಚಿಟ್ಟರು. ಕತ್ತರಿಸಿದ ಬಗೆ, ಬಣ್ಣ, ಸ್ಪಷ್ಟತೆ ಮತ್ತು ಕ್ಯಾರೆಟ್ ಹೀಗೆ ನಾಲ್ಕು ಅಂಶಗಳ (ನಾಲ್ಕು ಸಿ) ಮೇಲೆ ವಜ್ರದ ಹರಳಿನ ಗುಣಮಟ್ಟ ನಿರ್ಧಾರವಾಗುತ್ತದೆ ಎಂದು ಫಾರ್‌ಎವರ್‌ಮಾರ್ಕ್‌ನ ಲೀನಾ ವಿವರಿಸಿದರು.

ಕೆಂಪು, ನೀಲಿ, ತಿಳಿ ನೇರಳೆ, ಕಿತ್ತಳೆ ಹೀಗೆ ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು, ಆಯಾ ಬಣ್ಣದ ಮೇಲೆ ವಜ್ರದ ಬೆಲೆ ನಿರ್ಧಾರವಾಗುತ್ತದೆ. ವಿವಿಧ ಆಕಾರ, ವಿನ್ಯಾಸಗಳಲ್ಲಿ ಲಭ್ಯವಿರುವ ವಜ್ರಗಳಲ್ಲಿ  ವೃತ್ತಾಕಾರದಲ್ಲಿ ತುಂಡರಿಸಿದ ವಜ್ರ ಹೆಚ್ಚು ಜನಪ್ರಿಯವಾಗಿದೆ. ಇದರ ಬೆಲೆಯೂ ಅಧಿಕವಾಗಿರುತ್ತದೆ ಎಂದರು. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !